Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗರುಡ ಪುರಾಣದ ಪ್ರಕಾರ ಸಾವು ಸಮೀಪಿಸಿದ ವ್ಯಕ್ತಿಗೆ ಏನೆಲ್ಲಾ ಅನುಭವವಾಗುತ್ತದೆ

Garuda purana

Krishnaveni K

ಬೆಂಗಳೂರು , ಬುಧವಾರ, 22 ಮೇ 2024 (09:32 IST)
Photo Courtesy: Twitter
ಬೆಂಗಳೂರು: ಗರುಡ ಪುರಾಣದಲ್ಲಿ ಸಾವು ಸಂಭವಿಸುವ ಕೆಲವೇ ಕ್ಷಣಗಳ ಮೊದಲು ಮತ್ತ ಸಾವಿನ ನಂತರ ಏನೆಲ್ಲಾ ಆಗುತ್ತದೆ ಎಂದು ವಿವರವಾಗಿ ಹೇಳಲಾಗಿದೆ. ಅದರಲ್ಲಿ ಪ್ರಮುಖ ಅಂಶಗಳನ್ನು ಇಲ್ಲಿ ನೀಡಿದ್ದೇವೆ ನೋಡಿ.

ಗರುಡ ಪುರಾಣದ ಪ್ರಕಾರ ಸಾವು ಸಮೀಪಿಸುವಾಗ ಆ ವ್ಯಕ್ತಿಗೆ ಅದರ ಸೂಚನೆ ಲಭಿಸುತ್ತದೆ. ಸಾವಿನ ಕೆಲವೇ ಸಮಯದ ಮೊದಲು ಆತ ತನ್ನ ಜೀವನದಲ್ಲಿ ಮಾಡಿದ ತಪ್ಪುಗಳು ಮತ್ತು ತನ್ನ ಬಾಲ್ಯದಿಂದ ಹಿಡಿದು ಇಲ್ಲಿಯವರೆಗಿನ ಬದುಕಿನ ಬಗ್ಗೆ ಮೆಲುಕು ಹಾಕಲು ಪ್ರಯತ್ನಿಸುತ್ತಾನೆ.

ಸಾವಿನ ಕೆಲವೇ ಕ್ಷಣಗಳ ಮೊದಲು ಒಬ್ಬ ವ್ಯಕ್ತಿ ಕೆಲವೊಂದು ಅರ್ಥವೇ ಆಗದಂತಹ ಮಾತುಗಳನ್ನು ಆಡುತ್ತಾನೆ. ಕೆಲವರು ತಮ್ಮ ತಪ್ಪುಗಳ ಬಗ್ಗೆ ಪಶ್ಚಾತ್ತಾಪ ಪಟ್ಟುಕೊಂಡರೆ ಮತ್ತೆ ಕೆಲವರು ತಾವು ಮಾಡಿದ ಕರ್ಮಗಳನ್ನು ನೆನೆಸಿಕೊಳ‍್ಳುತ್ತಾರೆ. ಸಾವು ಸಮೀಪಿಸುವ ಸಂದರ್ಭದಲ್ಲಿ ಒಬ್ಬ ವ್ಯಕ್ತಿಗೆ ಪೂರ್ವಜರು ಕನಸಿನಲ್ಲಿ ಬರುತ್ತಾರೆ. ಕೆಲವೊಮ್ಮೆ ಪೂರ್ವಜರು ನಗುತ್ತಿರುವಂತೆ ಮತ್ತೆ ಕೆಲವರಿಗೆ ರೋಧಿಸುತ್ತಿರುವಂತೆ ಕಂಡುಬರುತ್ತದೆ.

ಸಾವು ಸಮೀಪ ಬಂದಾಗ ವ್ಯಕ್ತಿಯು ಯಮದೂತರನ್ನು ನೋಡುತ್ತಾನೆ. ಕೆಲವರು ಆತನನ್ನು ನೋಡಿ ನಕ್ಕರೆ ಮತ್ತೆ ಕೆಲವರು ಬೇಸರಗೊಳ್ಳುತ್ತಾರೆ. ಸಾವು ಬಂದ ತಕ್ಷಣ ಒಂದು ಬಾಗಿಲು ತೆರೆಯುತ್ತದೆ. ಅಲ್ಲಿ ಕೆಲವರಿಗೆ ಜ್ವಾಲೆ ಕಂಡರೆ ಮತ್ತೆ ಕೆಲವರಿಗೆ ಪ್ರಕಾಶಮಾನವಾದ ಬೆಳಕು ಕಂಡುಬರುತ್ತದೆ. ಅವರವರ ಕರ್ಮಗಳಿಗೆ ಅನುಸಾರವಾಗಿ ಹೀಗೆ ಕಂಡುಬರುತ್ತದೆ ಎಂದು ಗರುಡಪುರಾಣದಲ್ಲಿ ಹೇಳಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?