Publish Date: Tue, 24 Nov 2020 (06:18 IST)
Updated Date: Tue, 24 Nov 2020 (06:21 IST)
ಬೆಂಗಳೂರು : ಮನುಷ್ಯ ಹುಟ್ಟಿನಿಂದ ಸಾವುಯುವವರೆಗೂ ಆತನ ಸಂಪೂರ್ಣ ಜೀವನವನ್ನು ನವಗ್ರಹಗಳು ನಿಯಂತ್ರಿಸುತ್ತವೆ. ಹಾಗಾಗಿ ನವಗ್ರಹಗಳು ಅನುಗ್ರಹ ನಮ್ಮ ಮೇಲಿದ್ದರೆ ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
ಒಂದೊಂದು ನವಗ್ರಹಗಳನ್ನು ವಿಭಿನ್ನ ಬಣ್ಣಗಳ ಪಗತೀಕವಾಗಿದೆ. ಹಾಗಾದ್ರೆ ನವಗ್ರಹಗಳಲ್ಲಿ ಒಂದಾದ ಶುಕ್ರ ಗ್ರಹವನ್ನು ಒಲಿಸಿಕೊಳ್ಳಲು ಯಾವ ಬಣ್ಣವನ್ನು ನಾವು ಬಳಸಬೇಕು ಎಂಬುದನ್ನು ತಿಳಿಯೋಣ.
ಶುಕ್ರ ಗ್ರಹವನ್ನು ಒಲಿಸಿಕೊಳ್ಳಲು ಬಿಳಿ ಬಣ್ಣವನ್ನು ಬಳಸಬೇಕು. ಇದು ಪ್ರಕಾಶಮಾನವಾದ ಬಿಳಿ ಬಣ್ಣವಾದ್ದರಿಂದ ಅತ್ಯಾಧುನಿಕತೆಯನ್ನು ಪ್ರತಿನಿಧಿಸುತ್ತದೆ. ಮಲ್ಲಿಗೆ, ಕಮಲ, ಲಿಲ್ಲಿ ಹೂಗಳನ್ನು ಹೆಚ್ಚಾಗಿ ಬಳಸಿ. ಶುಕ್ರ ಗ್ರಹ ಅನುಗ್ರಹ ಪಡೆದುಕೊಳ್ಳಲು ವಜ್ರವನ್ನು ಧರಿಸಬೇಕು. ಹಾಗೇ ಸ್ಪಟಿಕವನ್ನು ಕೂಡ ಬಳಸಬಹುದು.