ಶಾಲಿವಾಹನ ಗತಶಕ ೨೯೪೦ನೇ ವಿಲಂಬಿ ನಾಮ ಸಂವತ್ಸರದ ಆಶಾಡ ಮಾಸ ಶುಕ್ಲ ಪಕ್ಷ ದಿನಾಂಕ ೨೬/೭/೨೦೧೮ ರಂದು ಗುರುವಾರ ತಿಥಿ ಚತುರ್ದಶಿ ರಾತ್ರಿ ೧೨ರ ವರೆಗೆ ಮಳೆ ನಕ್ಷತ್ರ ಪುಷ್ಯ ನಿತ್ಯ ನಕ್ಷತ್ರ ಪೂರ್ವಾಷಾಡ ರಾತ್ರಿ ೯.೩೦ರ ವರೆಗೆ.
ಸೂರ್ಯೊದಯ ೬-೧೮ ಸೂರ್ಯಾಸ್ತ ೭-೦೦ ರಾಹುಕಾಲ ಮದ್ಯಾಹ್ನ ೧-೩೦ರಿಂದ ೩ರ ವರೆಗೆ. ಇವತ್ತು ಚತುರ್ದಶಿ ಶ್ರಾದ್ದಾದಿಗಳನ್ನ ಮಾಡತಕ್ಕದ್ದು ಹೋಮ ಹವನಾದಿಗಳಿಗೆ ಅಗ್ನಿ ಇರುತ್ತದೆ. ಮಂಗಳ ಕಾರ್ಯಕ್ಕೆ ಗ್ರಹಣ ದೋಷವಿರುವದರಿಂದ ಶುಭವಲ್ಲ. ಚಂದ್ರ ಶನಿಯುತಿ. ರಾತ್ರಿ ೪-೧೧ಕ್ಕೆ ಚಂದ್ರ ಮಕರ ರಾಶಿ ಪ್ರವೇಶ ಗ್ರಹಣ ಪಲ ಪ್ರಾರಂಬ.
ರಾಶಿಫಲ.
ಮೇಷ. ಅಧಿಕಾರಕ್ಕೆ ಚ್ಯುತಿ ಬರುವ ಸಂದೇಹ. ಆರೋಗ್ಯ ಉತ್ತಮ. ಹಾಲಿನ ವ್ಯವಹಾರದಲ್ಲಿ ಉತ್ತಮ ಲಾಭ.
ವೃಷಭ. ಇಡಿ ದಿನ ಅಧಿಕಾರಿ ಜನರ ಕಿರುಕುಳ. ಅನಾರೋಗ್ಯ ಮಾರುಕಟ್ಟೆಯಲ್ಲಿ ತೊಂದರೆ.