ಬೆಂಗಳೂರು : ಇಂದು ವರಮಹಾಲಕ್ಷ್ಮೀ ಹಬ್ಬ. ಮುತ್ತೈದೆಯರು ತಮ್ಮ ಪತಿಯ ಶ್ರೇಯಸ್ಸಿಗಾಗಿ ಈ ದಿನ ಲಕ್ಷ್ಮೀ ದೇವಿಯನ್ನು ಪೂಜಿಸಿ ಆರಾಧಿಸುತ್ತಾರೆ. ಇಂದು ಲಕ್ಷ್ಮೀಗೆ ಸುಗಂಧ ದ್ರವ್ಯಗಳನ್ನು , ವಿವಿಧ ಹೂವು ಹಣ್ಣುಗಳನ್ನು, ಅರಶಿನ ಕುಂಕುಮಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ಆದರೆ ಇಂದು ಮಾಡುವ ಈ ಲಕ್ಷ್ಮೀ ಪೂಜೆ ಫಲ ನೀಡಬೇಕೆಂದರೆ ಈ ಒಂದು ಹೂವನ್ನಿಟ್ಟು ಪೂಜೆ ಮಾಡಬೇಕಂತೆ.
ಹೌದು. ಲಕ್ಷ್ಮೀ ಪೂಜೆಯಲ್ಲಿ ಯಾವುದೇ ವಸ್ತು ಬಳಸದಿದ್ದರೂ ಲಕ್ಷ್ಮೀ ದೇವಿಗೆ ಪ್ರಿಯವಾದ ಒಂದೇ ಒಂದು ಕಮಲದ ಹೂವನ್ನು ತಂದು ಲಕ್ಷ್ಮೀ ದೇವಿಗೆ ಇಟ್ಟು ಪೂಜಿಸಿದರೆ ಸಾಕು ಆ ಲಕ್ಷ್ಮೀ ಸದಾ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ ಎಂದು ಪಂಡಿತರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ