Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶ್ರಾವಣ ಮಾಸದಲ್ಲಿ ದಾನ ಮಾಡುವಾಗ ಈ ನಿಯಮ ಪಾಲಿಸಿದರೆ ನಿಮ್ಮ ಇಷ್ಟಾರ್ಥ ನೆರವೇರುತ್ತದೆ

ಶ್ರಾವಣ ಮಾಸದಲ್ಲಿ ದಾನ ಮಾಡುವಾಗ ಈ ನಿಯಮ ಪಾಲಿಸಿದರೆ ನಿಮ್ಮ ಇಷ್ಟಾರ್ಥ ನೆರವೇರುತ್ತದೆ
ಬೆಂಗಳೂರು , ಗುರುವಾರ, 8 ಆಗಸ್ಟ್ 2019 (09:05 IST)
ಬೆಂಗಳೂರು : ಶ್ರಾವಣ ಮಾಸಕ್ಕೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಈ ತಿಂಗಳ ಭೋಲೆನಾಥನ ಆರಾಧನೆ ನಡೆಯುತ್ತದೆ. ಜೊತೆಗೆ  ಈ ತಿಂಗಳು ಶ್ರೀ ವಿಷ್ಣುವಿನ ಆರಾಧನೆ ಕೂಡ ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ಈಶ್ವರನ ಪೂಜೆಯ ಜೊತೆಗೆ ದಾನಕ್ಕೂ ಮಹತ್ವದ ಸ್ಥಾನವಿದೆ. ಈ ತಿಂಗಳು ಮಾಡಿದ ದಾನ ಹೆಚ್ಚು ಫಲ ನೀಡುತ್ತದೆ ಎನ್ನಲಾಗಿದೆ.




ಶ್ರಾವಣ ಮಾಸದಲ್ಲಿ ಬಡವರು, ಬ್ರಾಹ್ಮಣರಿಗೆ, ಹಸಿದವರಿಗೆ  ಬಟ್ಟೆ, ಆಹಾರ, ಹಸು, ಕುದುರೆ, ಹಾಸಿಗೆ ನೀರು ದಾನ ಮಾಡುವುದು ಶುಭಕರ ಎನ್ನಲಾಗಿದೆ. ಎಳ್ಳು, ಅಕ್ಕಿ ಧಾನ್ಯಗಳನ್ನು ದಾನ ಮಾಡುವಾಗ ಕೈಯಲ್ಲಿಯೇ ದಾನ ಮಾಡಬೇಕು. ಇದರಿಂದ ಮನೆಗೆ, ಮನೆಯವರಿಗೆ ಶುಭವಾಗುತ್ತದೆ.


ಹಾಗೇ ದಾನ ಮಾಡುವಾಗ ಪೂರ್ವ ದಿಕ್ಕಿಗೆ ಮುಖ ಮಾಡಿ ದಾನ ಮಾಡಬೇಕು. ದಾನ ಪಡೆಯುವ ವ್ಯಕ್ತಿ ಮುಖ ಉತ್ತರ ದಿಕ್ಕಿಗಿರಬೇಕು. ಹೀಗೆ ನಿಸ್ವಾರ್ಥದಿಂದ ದಾನ ಮಾಡಿದ್ರೆ ದೈವ ಕೃಪೆಯಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ