Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತೆಂಗಿನಕಾಯಿ ಒಡೆದು ದೇವರಿಗೆ ಅರ್ಪಿಸುವಾಗ ಈ ನಿಯಮವನ್ನು ಪಾಲಿಸಲೇಬೇಕು

ತೆಂಗಿನಕಾಯಿ ಒಡೆದು ದೇವರಿಗೆ ಅರ್ಪಿಸುವಾಗ ಈ ನಿಯಮವನ್ನು ಪಾಲಿಸಲೇಬೇಕು
ಬೆಂಗಳೂರು , ಗುರುವಾರ, 28 ಡಿಸೆಂಬರ್ 2017 (10:13 IST)
ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ ಪೂಜೆ ಹಾಗು ಇತರ ಶುಭ ಕಾರ್ಯಗಳನ್ನು ಮಾಡಬೇಕೆಂದರೆ ತೆಂಗಿನಕಾಯಿ ಇರಲೇ ಬೇಕು. ತೆಂಗಿನಕಾಯಿ ಇಲ್ಲದೆ ಯಾವ ದೇವಸ್ಥಾನದಲ್ಲೂ ಹಣ್ಣುಕಾಯಿ ಸೇವೆ ಪೂರ್ಣವಾಗುವುದಿಲ್ಲ. ಈ ತೆಂಗಿನಕಾಯಿ ಒಡೆಯಲು ಕೆಲವು ನಿಯಮಗಳಿವೆ.


ತೆಂಗಿನಕಾಯಿ ಒಡೆಯುವ ಮೊದಲು ಅದನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಬೇಕು. ಆಮೇಲೆ ಕೈಯಲ್ಲಿ ಹಿಡಿದು ದೇವರನ್ನು ಸ್ಮರಿಸಬೆಕು. ತೆಂಗಿನಕಾಯಿಯನ್ನು ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ಒಡೆಯಬೇಕು. ಅದು ಸಮವಾಗಿ ಎರಡು ಭಾಗವಾಗಬೇಕು. ಒಂದುವೇಳೆ ಸ್ವಲ್ಪ ಹೆಚ್ಚು ಕಡಿಮೆಯಾದರೆ ಆಶುಭವೆಂದು ಭಾವಿಸಬೇಕಿಲ್ಲ.


ತೆಂಗಿನಕಾಯಿ ಒಡೆದಾಗ ಹಾಳಾಗಿದ್ದರೆ ನಂತರ ಮತ್ತೆ ಕೈಕಾಲು ತೊಳೆದುಕೊಂಡು ಬೇರೆ ತೆಂಗಿನಕಾಯಿಯನ್ನು ಒಡೆದು ದೇವರಿಗೆ ಅರ್ಪಿಸಿ ‘ಓಂ ನಮಃ ಶಿವಾಯ’ ಎಂಬ ಪಂಚಾಕ್ಷರಿ ಮಂತ್ರವನ್ನು ಜಪಿಸಬೇಕು. ಇದರಿಂದ ಯಾವ ಕೇಡು ಸಂಭವಿಸುವುದಿಲ್ಲ. ತೆಂಗಿನಕಾಯಿಯನ್ನು ಒಡೆದ ನಂತರ ಎರಡು ಭಾಗಗಳನ್ನು ಬೇರೆಬೇರೆಯಾಗಿ ಮಾಡಿ ಅದರಲ್ಲಿರುವ ನೀರನ್ನು ಸರಿಯಾಗಿ ತೆಗೆದು ದೇವರಿಗೆ ಅರ್ಪಿಸಬೇಕು. ಭಕ್ತಿಯಿಂದ ಅರ್ಪಿಸಿದ ತೆಂಗಿನಕಾಯಿಯನ್ನು ದೇವರು ಸ್ವೀಕರಿಸಿ ನಮ್ಮ ಇಷ್ಟಾರ್ಥಗಳನ್ನು ನೇರವೆರಿಸುತ್ತಾನೆ ಎಂದು ಭಗವದ್ಗೀತೆಯಲ್ಲಿ ಉಲ್ಲೆಖವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದಾರಿಯಲ್ಲಿ ಶವಯಾತ್ರೆ ನೋಡಿದರೆ ಶುಭವೊ ಆಥವಾ ಆಶುಭವೊ ತಿಳಿಯಿರಿ