ಬೆಂಗಳೂರು: ಸಾವಿನಿಂದ ಯಾವ ವ್ಯಕ್ತಿಯು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜನನದ ಹಿಂದೆ ಮರಣ ಇದ್ದೆಇರುತ್ತದೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಮರಣ ನಂತರ ಆತ್ಮ ಪುನರ್ಜನ್ಮ ಪಡೆಯುತ್ತದೆ. ಶವಯಾತ್ರೆ ನೋಡಿದವರಿಗೆ ಒಳ್ಳೆದಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿದೆ.
ಸಾಮಾನ್ಯವಾಗಿ ವ್ಯಕ್ತಿಯೊಬ್ಬ ದಾರಿಯಲ್ಲಿ ಹೋಗುತ್ತಿರುವಾಗ ಶವಯಾತ್ರೆ ಕಂಡರೆ ತಕ್ಷಣ ಆತ ಆ ಶವಕ್ಕೆ ಕೈಮುಗಿದು ಶಿವಶಿವ ಎಂದು ಶಿವನಾಮ ಜಪಿಸಬೇಕು. ಏಕೆಂದರೆ ಸಾವನಪ್ಪಿದ ವ್ಯಕ್ತಿ ತನ್ನ ಶವಕ್ಕೆ ನಮಸ್ಕರಿಸಿದ ವ್ಯಕ್ತಿಯ ನೋವು-ದುಖಃವನ್ನೆಲ್ಲ ಕೊಂಡೊಯ್ಯುತ್ತಾನಂತೆ. ಹಾಗೆ ಸಾವನಪ್ಪಿದ ವ್ಯಕ್ತಿಯ ಆತ್ಮಕ್ಕೆ ಮುಕ್ತಿ ಕೂಡ ಸಿಗುತ್ತದೆಯಂತೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಶವಯಾತ್ರೆ ನೋಡುವುದು ಶುಭ ಎಂದು ಹೇಳಲಾಗಿದೆ. ಶವಯಾತ್ರೆ ನೋಡಿದರೆ ಅರ್ಧಕ್ಕೆ ನಿಂತ ಕೆಲಸ ಪೂರ್ಣವಾಗುತ್ತದೆಯಂತೆ. ಕಷ್ಟಗಳೆಲ್ಲ ದೂರವಾಗುವುದಲ್ಲದೆ ಮನಸ್ಸಿನ ಆಸೆ ಕೂಡ ಪೂರೈಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರಹೇಳುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ