Publish Date: Thu, 12 Nov 2020 (06:01 IST)
Updated Date: Thu, 12 Nov 2020 (06:03 IST)
ಬೆಂಗಳೂರು : ಗ್ರಹಗಳು ಕೂಡ ನಮ್ಮ ಆರೋಗ್ಯವನ್ನು ನಿಯಂತ್ರಿಸುತ್ತವೆ. ಆದಕಾರಣ ನೀವು ಯಾವುದೇ ಅನಾರೋಗ್ಯಕ್ಕೆ ಒಳಗಾದರೆ ಜಾತಕ ಹಾಗೂ ಜ್ಯೋತಿಷ್ಯದ ಮೂಲಕ ದೋಷಪೂರಿತ ಗ್ರಹಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಹಾಗಾದ್ರೆ ಶನಿಗ್ರಹ ದುರ್ಬಲವಾದರೆ ನಿಮಗೆ ಯಾವ ಸಮಸ್ಯೆ ಕಾಡುತ್ತದೆ. ಅದಕ್ಕೆ ಪರಿಹಾರವೇನು ಎಂಬುದನ್ನು ತಿಳಿದುಕೊಳ್ಳಿ.
ನಿಮ್ಮ ಜಾತಕದಲ್ಲಿ ಶನಿ ಗ್ರಹ ದುರ್ಬಲವಾಗಿದ್ದರೆ ನೀವು ಹಲ್ಲಿನ ಸಮಸ್ಯೆ, ಸಂಧಿವಾತ, ಕಾಲುಗಳಲ್ಲಿ ತೊಂದರೆಗಳು, ಪಾದಗಳಲ್ಲಿ ಊತ, ಪಾರ್ಶ್ವವಾಯು, ಚರ್ಮದ ತೊಂದರೆಗಳು ಮತ್ತು ಶಸ್ತ್ರಚಿಕಿತ್ಸೆಗಳಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಈ ಸಮಸ್ಯೆ ನಿವಾರಿಸಲು ಈ ಪರಿಹಾರವನ್ನು ಮಾಡಿ. ಅಗತ್ಯವಿರುವವರಿಗೆ ಪಾದರಕ್ಷೆಗಳನ್ನು ದಾನ ಮಾಡಿ. ರಾತ್ರಿಯ ವೇಳೆ ಹಾಲು ಸೇವಿಸಬೇಡಿ, ಅದರಲ್ಲೂ ಎಮ್ಮೆಯ ಹಾಲನ್ನು ಸೇವಿಸಬೇಡಿ. ಬೆಳ್ಳಿಯ ಸಣ್ಣ ವಸ್ತುಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಅಂಧರಿಗೆ ಸಹಾಯ ಮಾಡಿ. ಜೇನುತುಪ್ಪವನನ್ಉ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿ ಹರಿಯುವ ನೀರಿನ ಅಡಿಯಲ್ಲಿ ಹೂತುಹಾಕಿ.