Publish Date: Tue, 10 Nov 2020 (08:23 IST)
Updated Date: Tue, 10 Nov 2020 (08:24 IST)
ಬೆಂಗಳೂರು : ಗ್ರಹಗಳು ಕೂಡ ನಮ್ಮ ಆರೋಗ್ಯವನ್ನು ನಿಯಂತ್ರಿಸುತ್ತವೆ. ಆದಕಾರಣ ನೀವು ಯಾವುದೇ ಅನಾರೋಗ್ಯಕ್ಕೆ ಒಳಗಾದರೆ ಜಾತಕ ಹಾಗೂ ಜ್ಯೋತಿಷ್ಯದ ಮೂಲಕ ದೋಷಪೂರಿತ ಗ್ರಹಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಹಾಗಾದ್ರೆ ಗುರುಗ್ರಹ ದುರ್ಬಲವಾದರೆ ನಿಮಗೆ ಯಾವ ಸಮಸ್ಯೆ ಕಾಡುತ್ತದೆ. ಅದಕ್ಕೆ ಪರಿಹಾರವೇನು ಎಂಬುದನ್ನು ತಿಳಿದುಕೊಳ್ಳಿ.
ನಿಮ್ಮ ಜಾತಕದಲ್ಲಿ ಗುರು ಗ್ರಹ ದುರ್ಬಲವಾಗಿದ್ದರೆ ನೀವು ಯಕೃತ್ತು, ಕಾಮಾಲೆ, ಬೊಜ್ಜು, ಕ್ಯಾನ್ಸರ್ ಮತ್ತು ಮಧುಮೇಹಕ್ಕೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಈ ಸಮಸ್ಯೆ ನಿವಾರಿಸಲು ಈ ಪರಿಹಾರವನ್ನು ಮಾಡಿ. ಹನೆಯ ಮೇಲೆ ಶ್ರೀಗಂಧದ ಪೇಸ್ಟ್ ಹಚ್ಚಿ. ಹಿರಿಯರಿಗೆ ಮತ್ತು ಅನಾಥರಿಗೆ ಬಾಳೆಹಣ್ಣು ಅಥವಾ ಸಿಹಿತಿಂಡಿಗಳನ್ನು ದಾನವಾಗಿ ನೀಡಿ. ನಿಮ್ಮ ಒಡಹುಟ್ಟಿದವರಿಗೆ ಸಹಾಯ ಮಾಡಿ. ಚಿನ್ನಾಭರಣಗಳನ್ನು ಧರಿಸಿ. ನಿಮ್ಮ ತಂದೆಯ ವಸ್ತುಗಳನ್ನು ಬಳಸಿ.