ಬೆಂಗಳೂರು : ಶಿವನನ್ನು ಶ್ರದ್ಧೆ ಭಕ್ತಿಯಿಂದ ಪೂಜಿಸಿದರೆ ನಮ್ಮ ಇಷ್ಟಾರ್ಥಗಳೆಲ್ಲ ನೇರವೇರುವುದರ ಜತೆಗೆ ನಮಗೆ ಎದುರಾದ ಕಷ್ಟ ಕಾರ್ಪಣ್ಯಗಳು ಶಿವಪೂಜೆಯಿಂದ ದೂರವಾಗುತ್ತದೆ ಎನ್ನುತ್ತಾರೆ. ಆದರೆ ಶಿವನನ್ನು ಪೂಜಿಸುವಾಗ ಕೇದಗೆ ಬಳಸಬಾರದು. ಒಂದು ವೇಳೆ ಬಳಸಿದರೆ ನಾವು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿತ್ತಾರೆ. ಇದಕ್ಕೆ ಕಾರಣವೆನೆಂಬುದು ಇಲ್ಲಿದೆ ನೋಡಿ
ಸಾವಿರಾರು ವರ್ಷಗಳ ಹಿಂದೆ ಬೃಹತ್ ಶಿವಲಿಂಗ ಸೃಷ್ಠಿಯಾಯಿತು. ಅದಕ್ಕೆ ಆರಂಭ-ಅಂತ್ಯ ಇರಲಿಲ್ಲ. ಅದನ್ನು ಕಂಡು ಹಿಡಿಯಲು ಬ್ರಹ್ಮ, ವಿಷ್ಣು ದ್ವಯರು ಶಿವನ ಆಜ್ಞೆ ಪಡೆದು ಹೋದರು. ಲಿಂಗದ ಆರಂಭ ತಿಳಿಯಲು ವಿಷ್ಣು, ಅಂತ್ಯ ಕಂಡು ಹಿಡಿಯಲು ಬ್ರಹ್ಮ ತಲಾ ಒಂದು ದಿಕ್ಕಿಗೆ ಹೋದರು. ಲಿಂಗದ ಆರಂಭ ಕಂಡು ಹಿಡಿಯಲು ಸಾಧ್ಯವಾಗದಿದ್ದರಿಂದ ವಿಷ್ಣು ವಾಪಸ್ ಆಗುತ್ತಾನೆ. ಆದರೆ ಬ್ರಹ್ಮ ದೇವ ತಾನು ಅಂತ್ಯ ನೋಡಿದ್ದೇನೆ ಎಂದು ಶಿವನ ಮುಂದೆ ಸುಳ್ಳು ಹೇಳುತ್ತಾನೆ. ಇದಕ್ಕೆ ಸಾಕ್ಷಿಯಾಗಿ ಬ್ರಹ್ಮ ಹೂವು (ಕೇದಗೆ) ಕೂಡ ಅದು ನಿಜ ಎಂದು ಹೇಳುತ್ತದೆ. ಇದರಿಂದ ಕೋಪಗೊಂಡ ಶಿವನು ತನ್ನ ಪೂಜೆಯಲ್ಲಿ ನಿನಗೆ ಸ್ಥಾನವಿಲ್ಲ ಎಂದು ಕೇದಗೆಗೆ ಹೇಳುತ್ತಾನೆ. ಆದ್ದರಿಂದ ಬ್ರಹ್ಮ ಹೂವು ಶಿವನ ಪೂಜೆಯಲ್ಲಿ ಸ್ಥಾನ ಕಳೆದುಕೊಂಡಿತು. ಆದಕಾರಣ ಶಿವ ಪೂಜೆಯಲ್ಲಿ ಬ್ರಹ್ಮಹೂವು ಮಾತ್ರ ಬಳಸಬಾರದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ