Webdunia - Bharat's app for daily news and videos

Install App

ವಿಷ್ಣು ಪುರಾಣದ ಪ್ರಕಾರ ಹುಡುಗರು ಎಂತಹ ಗುಣಗಳಿರುವ ಹುಡುಗಿಯನ್ನು ಮದುವೆಯಾಗಬೇಕಂತೆ ಗೊತ್ತಾ?

Webdunia
ಮಂಗಳವಾರ, 22 ಮೇ 2018 (08:50 IST)
ಬೆಂಗಳೂರು : ಮದುವೆಗಳು ಸ್ವರ್ಗದಲ್ಲಿ ನಿರ್ಧಾರವಾಗಿ ಭೂಮಿಯ ಮೇಲೆ ನಡೆಯುತ್ತವೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ ಮದುವೆಯಾಗುವುದಕ್ಕೆ ಮುಂಚೆ ಹಿಂದೆ ಮುಂದೆ ವಿಚಾರಿಸಿ ಮದುವೆಯಾಗಬೇಕು ಎಂದು ಸಹ ಹೇಳುತ್ತಾರೆ. ಆದರೆ ವಿಷ್ಣು ಪುರಾಣದ ಪ್ರಕಾರ ಹುಡುಗರು ಮದುವೆಗೆ ಮುಂಚೆ ಹುಡುಗಿಯರಲ್ಲಿ ಕಡ್ಡಾಯವಾಗಿ ಕೆಲವು ಗುಣಗಳನ್ನು ನೋಡಬೇಕು ಎಂದು ಹೇಳುತ್ತದೆ.ಆ ಗುಣಗಳು ಯಾವುವೆಂದರೆ :

*ಒಂದೇ ಕುಟುಂಬಕ್ಕೆ ಸೇರಿದ ಮಹಿಳೆಯನ್ನು ಯಾವುದೇ ಕಾರಣಕ್ಕೂ ಮದುವೆಯಾಗಬಾರದು. ಒಂದುವೇಳೆ ಅವರು ಸಿಸ್ಟರ್ಸ್, ಬ್ರದರ್ಸ್ ರಿಲೇಷನ್ ಆಗದಿದ್ದರೂ, ಒಂದೇ ಗೋತ್ರಕ್ಕೆ ಸೇರಿದವರನ್ನು ಮಾಡಿಕೊಳ್ಳುವುದು ಅಶುಭ ಎಂದು ವಿಷ್ಣು ಪುರಾಣ ಹೇಳುತ್ತದೆ.

*ಭ್ರಷ್ಟಾಚಾರದಲ್ಲಿ ಭಾಗಿಯಾದ ಗಂಡಸರು ಅಥವಾ ಹೆಂಗಸರ ಜೊತೆಗೆ ಸ್ನೇಹ ಹೊಂದಿರುವ ಮಹಿಳೆಯರನ್ನು ಯಾವುದೇ ಕಾರಣಕ್ಕೂ ವಿವಾಹ ಮಾಡಿಕೊಳ್ಳಬಾರದು. ಅಂತಹವರ ನೆಗೆಟಿವ್ ಎಫೆಕ್ಟ್ ನಿಂದ ಒಳ್ಳೆಯ ಹೆಂಡತಿಯಾಗಿ ಇರಲಾರರು.

*ಅಸಭ್ಯವಾದ ಪದಗಳನ್ನು ಉಪಯೋಗಿಸುವ ಮಹಿಳೆಯರು, ಯಾವಾಗಲೂ ಬೈಯುವ ಮಹಿಳೆಯರನ್ನು ಮದುವೆಯಾಗದಿರುವುದೇ ಒಳ್ಳೆಯದು. ಇಂತಹ ವರ್ತನೆ ಸಂತೋಷದ ವೈವಾಹಿಕ ಜೀವನವನ್ನು ನೀಡುವುದಿಲ್ಲ.

*ವಿಷ್ಣು ಪುರಾಣದ ಪ್ರಕಾರ ಹೆಚ್ಚು ನಿದ್ದೆ ಮಾಡುವ ಮಹಿಳೆಯನ್ನು ಮದುವೆಯಾಗಬಾರದಂತೆ. ಯಾಕೆಂದರೆ ಮನೆಯ ಕೆಲಸದ ಮೇಲೆ ಆಸಕ್ತಿ ಇರುವುದಿಲ್ಲ.

*ಸುಂದರವಾಗಿದ್ದು, ಬುದ್ದಿವಂತಿಕೆ ಇಲ್ಲದವರನ್ನು ಯಾವುದೇ ಕಾರಣಕ್ಕೂ ಮದುವೆಯಾಗಬೇಡಿ.

*ಒರಟಾಗಿ ವ್ಯವಹರಿಸುವ ಹುಡುಗಿಯರು ತುಂಬಾ ಕೋಪ, ಮರ್ಯಾದೆ ಇಲ್ಲದ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇಂತಹಾ ಹುಡುಗಿಯರನ್ನು ಯಾವುದೇ ಕಾರಣಕ್ಕೂ ಮದುವೆಯಾಗಬೇಡಿ. ಇಂತಹವರು ಗಂಡನ ಜೀವನದಲ್ಲಿ ಸಂತೋಷ ಇಲ್ಲದಂತೆ ಮಾಡುತ್ತಾರೆ.

*ಗಂಡನ ವಿಷಯದಲ್ಲಿ ಸುಳ್ಳು ಹೇಳಿದ ಮಹಿಳೆಯರು ತಮ್ಮ ಕುಟುಂಬವನ್ನು ಸಹ ನಾಶ ಮಾಡಬಹುದು. ಪ್ರಾಮಾಣಿಕತೆ ಇಲ್ಲದವರ ಜೊತೆ ಅಪಾಯ ಖಂಡಿತ. ಆದ್ದರಿಂದ ಇಂತಹ ಮಹಿಳೆಯರನ್ನು ವಿವಾಹವಾಗಬೇಡಿ ಎಂದು ವಿಷ್ಣು ಪುರಾಣ ಹೇಳುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾರ್ತಿಕ ಮಾಸದಲ್ಲಿ ಹೀಗೆ ಮಾಡುವುದರಿಂದ ಮೋಕ್ಷ ಸಿಗುವುದು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ ತಪ್ಪದೇ ಮಹಾವಿಷ್ಣುವಿನ ಈ ಮಂತ್ರವನ್ನು 21 ಬಾರಿ ಹೇಳಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಕಾರ್ಯ ಸಿದ್ಧಿಯಾಗಬೇಕಾದರೆ ಗಣಪತಿಯ ಈ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments