Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲಕ್ಷ್ಮಿಕಟಾಕ್ಷ ಸಿಗಬೇಕೆಂದರೆ ಈ 5 ವಸ್ತುಗಳನ್ನು ಪೂಜೆಯಲ್ಲಿ ಇಡಬೇಕಂತೆ

ಲಕ್ಷ್ಮಿಕಟಾಕ್ಷ ಸಿಗಬೇಕೆಂದರೆ ಈ 5 ವಸ್ತುಗಳನ್ನು ಪೂಜೆಯಲ್ಲಿ ಇಡಬೇಕಂತೆ
ಬೆಂಗಳೂರು , ಸೋಮವಾರ, 7 ಮೇ 2018 (06:38 IST)
ಬೆಂಗಳೂರು : ಹಿಂದೂ ಪುರಾಣಗಳ ಪ್ರಕಾರ ಲಕ್ಷ್ಮಿದೇವಿ ಧನಕ್ಕೆ, ಐಶ್ವರ್ಯಕ್ಕೆ ಅಧಿಪತಿ. ಆಕೆಯನ್ನು ಪೂಜಿಸಿದರೆ ಎಲ್ಲವೂ ಶುಭವಾಗುತ್ತದೆಂದು, ಹಣ ಹರಿದು ಬರುತ್ತದೆಂದು ಬಹಳಷ್ಟು ಮಂದಿಯ ನಂಬಿಕೆ. ವ್ಯಾಪಾರಿಗಳಾದರೆ ತಮ್ಮ ಅಂಗಡಿಗಳಲ್ಲಿ, ಮಳಿಗೆಗಳಲ್ಲಿ, ಇತರೆ ಪ್ರದೇಶಗಳಲ್ಲಿ ಲಕ್ಷ್ಮಿದೇವಿಯ ಫೋಟೋವನ್ನು ಇಟ್ಟೇ ಇರುತ್ತಾರೆ. ಆ ರೀತಿ ಮಾಡಿದರೆ ವ್ಯಾಪಾರದಲ್ಲಿ ಚೆನ್ನಾಗಿ ಹಣ ಸಂಪಾದಿಸಬಹುದು ಎಂಬುದು ಅವರ  ನಂಬಿಕೆ. ಆದರೆ ಲಕ್ಷ್ಮಿ ಅನುಗ್ರಹ ಸಿದ್ದಿಸಬೇಕೆಂದರೆ ಪೂಜೆ ಮಾತ್ರವಲ್ಲ, ಇನ್ನೂ ಕೆಲವು ಕೆಲಸಗಳನ್ನೂ ಮಾಡಬೇಕಾಗಿರುತ್ತವೆ. ಆಗ ಆ ದೇವಿ ಕಟಾಕ್ಷ ಇನ್ನೂ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಲಕ್ಷ್ಮಿಕಟಾಕ್ಷಕ್ಕಾಗಿ ಏನೇನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ.

 
*ಒಂದು ನವಿಲು ಗರಿ ತಂದುಕೊಂಡು ಅದನ್ನು ನೀವು ಲಕ್ಷ್ಮಿ ದೇವಿಯನ್ನು ಪೂಜಿಸುವ ಬಳಿ ಇಡಬೇಕು. ಇದರಿಂದ ಆ ದೇವಿ ಅನುಗ್ರಹ ಸಿಗುತ್ತದೆ.

* ಬಂಗಾರ ಅಥವಾ ಬೆಳ್ಳಿಯಿಂದ ಮಾಡಿದ ನಾಣ್ಯವನ್ನು ಪೂಜಾಕೋಣೆಯಲ್ಲಿ ಇಡಬೇಕು. ಆ ನಾಣ್ಯದ ಮೇಲೆ ಲಕ್ಷ್ಮಿದೇವಿ, ವಿನಾಯಕ ಇದ್ದರೆ ಇನ್ನೂ ಒಳಿತು. ಇದರಿಂದ ಅಪಾರ ಸಂಪತ್ತು ಉಂಟಾಗುತ್ತದೆ.

*ತಾವರೆ ಹೂವು ಎಂದರೆ ಲಕ್ಷ್ಮಿದೇವಿಗೆ ಎಷ್ಟೋ ಇಷ್ಟ. ಆ ದೇವಿ ತಾವರೆ ಹೂವಿನ ಮೇಲೆ ಕುಳಿತುಕೊಳ್ಳುತ್ತದೆ ಆದಕಾರಣ ಇದರಿಂದ ಆಕೆಯನ್ನು ಪೂಜಿಸಿದರೆ ಎಲ್ಲಾ ಲಾಭಗಳೇ ಉಂಟಾಗುತ್ತವೆ.

*ಮಹಿಳೆಯರು ಹಣೆಗೆ ಧರಿಸುವ ಕುಂಕುಮ, ಕೈಗಳಿಗೆ ಧರಿಸುವ ಬಳೆ, ಗೋರಂಟಿಯಂತಹ ಹಲವು ವಿಧದ ಅಲಂಕಾರಿಕ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕಂತೆ. ಇದರಿಂದ ಅವರಿಗೆ ಒಳಿತಾಗಿ ಸಂಪತ್ತು ಸಿದ್ಧಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ದೇವಸ್ಥಾನದ ಬಳಿ ಇರುವ ವೃಕ್ಷಗಳಿಗೆ ಭಕ್ತರು ಪೂಜೆ ಮಾಡುವುದು ಇದೇ ಕಾರಣಕ್ಕಾಗಿಯಂತೆ!