Publish Date: Sun, 01 Mar 2020 (09:17 IST)
Updated Date: Sun, 01 Mar 2020 (09:19 IST)
ಬೆಂಗಳೂರು : ನವರತ್ನಗಳಲ್ಲಿ ಮುತ್ತು ಕೂಡ ಒಂದು. ಮುತ್ತು ಶಾಂತ ಮತ್ತು ಮೃದುತ್ವದ ಸಂಕೇತ. ಇದನ್ನು ಧರಿಸಿದರೆ ಮನಸ್ಸು ಪ್ರಶಾಂತತೆಯಿಂದ ಕೂಡಿರುತ್ತದೆ ಎಂದು ಹೇಳುತ್ತಾರೆ. ಆದರೆ ಇದನ್ನು ಎಲ್ಲರೂ ಧರಿಸುವ ಹಾಗಿಲ್ಲ.
ಮುತ್ತನ್ನು ಮೇಷ, ಕರ್ಕ, ವೃಶ್ಚಿಕ ಮತ್ತು ಮೀನ ರಾಶಿಯವರು ಧರಿಸಿದರೆ ಉತ್ತಮ. ಇದರಿಂದ ಇವರಿಗೆ ಒಳ್ಳೆದಾಗುತ್ತದೆ. ಆದರೆ ವೃಷಭ, ಮಿಥುನ, ಕನ್ಯಾ, ಮಕರ ಮತ್ತು ಕುಂಭ ರಾಶಿಯವರು ಯಾವುದೇ ಕಾರಣಕ್ಕೂ ಮುತ್ತನ್ನು ಧರಿಸಬಾರದು. ಇದರಿಂದ ದುರದೃಷ್ಟ ಅವರ ಬೆನ್ನು ಹತ್ತುತ್ತದೆ. ಹಾಗೇ ಮುತ್ತು ಶಾಂತಿಯ ಸಂಕೇತವಾದ್ದರಿಂದ ಕೋಪವುಳ್ಳ ವ್ಯಕ್ತಿಗಳು ಮುತ್ತಿನ ಧಾರಣೆ ಮಾಡಬಾರದು.