ಬೆಂಗಳೂರು : ಮನೆಯಲ್ಲಿ ಊಟ, ಬಟ್ಟೆಗೆ ಕೊರತೆ ಬರಬಾರದು ಎಂದು ಎಲ್ಲರೂ ಬಯಸುತ್ತಾರೆ. ಮನೆಯಲ್ಲಿ ದಾರಿದ್ರ್ಯ ತೊಲಗಬೇಕು ಅಂತ ಅಂದುಕೊಳ್ಳುತ್ತಾರೆ. ಆದರೆ ಅವರಿಗೆ ತಿಳಿಯದ ಹಾಗೆ ಕೆಲವು ದಾರಿದ್ರ್ಯ ತರುವ ಕೆಲಸಗಳನ್ನು ಮಾಡುತ್ತಾರೆ. ಅದೇನೆಂದರೆ ತುಂಬಾ ಹಸಿವಾದಾಗ ಕೆಲವರು ಊಟ ಮಾಡುವಾಗ ಎಲ್ಲೇಂದರಲ್ಲಿ ಕುಳಿತು ಊಟ ಮಾಡುತ್ತಾರೆ. ಅದರಲ್ಲೂ ಕೆಲವರು ಮನೆಯ ಬಾಗಿಲ ಹೊಸ್ತಿಲ ಮಧ್ಯ ಕುಳಿತು ಊಟ ಮಾಡುತ್ತಾರೆ. ಒಟ್ಟಿನಲ್ಲಿ ಅವರಿಗೆ ಹೊಟ್ಟೆ ತುಂಬಿದರೆ ಸಾಕು. ಇದು ಮನೆಗೆ ದಾರಿದ್ರ್ಯ ತರುತ್ತದೆ ಎಂಬುದು ಅವರಿಗೆ ತಿಳಿದಿರುವುದಿಲ್ಲ.
ಮನೆಯಲ್ಲಿ ಊಟ ಮಾಡುವಾಗ ಈ ಒಂದು ದಿಕ್ಕಿನಲ್ಲಿ ಕುಳಿತೆ ಊಟ ಮಾಡಬೇಕು. ಇದರಿಂದ ಮನೆಗೆ ಒಳ್ಳೆದಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಮನೆಯವರು ಊಟ ಮಾಡುವಾಗ ಅದರಲ್ಲೂ ಗೃಹಿಣಿ ಊಟಮಾಡುವಾಗ ಅಡುಗೆ ಮನೆಯಲ್ಲಿ ದಕ್ಷಿಣ ದಿಕ್ಕಿಗೆ ಮುಖಮಾಡಿ ಕುಳಿತು ಬಟ್ಟಲಲ್ಲಿ ಊಟ ವನ್ನು ಮಾಡುವುದರಿಂದ ಪಿತೃದೇವತೆಗಳು, ಯಮದೇವತೆಗಳು ಸಂತೃಪ್ತರಾಗಿ ಆ ಮನೆಯಲ್ಲಿ ಧನ ಸಂಪತ್ತು, ಊಟ, ಬಟ್ಟೆ, ಸಂತೋಷ ಎಲ್ಲಾ ಸದಾ ನೆಲೆಸಿರುವಂತೆ ಮಾಡುತ್ತಾರೆ ಎಂದು ಧರ್ಮಶಾಸ್ತ್ರ ಹೇಳುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ