Webdunia - Bharat's app for daily news and videos

Install App

ದೇವಸ್ಥಾನದಲ್ಲಿ ಚಪ್ಪಲಿ ಕಳುವಾದರೆ ಅದೃಷ್ಟವೋ ಅಥವಾ ದುರಾದೃಷ್ಟವೊ ಎಂದು ತಿಳಿಬೇಕಾ…?

Webdunia
ಶುಕ್ರವಾರ, 19 ಜನವರಿ 2018 (07:50 IST)
ಬೆಂಗಳೂರು : ದೇವಸ್ಥಾನಗಳಲ್ಲಿ ಚಪ್ಪಲಿ ಕಳ್ಳತನವಾಗುವುದು ಒಂದು ಸಾಮಾನ್ಯ ಸಂಗತಿ. ಚಪ್ಪಲಿ ಕಳ್ಳತನವಾದರೆ ಅದರಿಂದ ನಮಗೆ ಆಗುವುದು ನಷ್ಟವೇ. ಆದರೆ ಜ್ಯೋತಿಷ್ಯ ಶಾಸ್ತ್ರಪ್ರಕಾರ ಅದು ನಮಗಾಗುವ ಲಾಭದ ಸಂಕೇತವಂತೆ.

 
ಜ್ಯೋತಿಷ್ಯ ಶಾಸ್ತ್ರಪ್ರಕಾರ ದೇವಸ್ಥಾನದಲ್ಲಿ ಚಪ್ಪಲಿ ಕಳ್ಳತನವಾಗುವುದು ಶುಭ ಸಂಕೇತವೆನ್ನುತ್ತಾರೆ. ಅದರಲ್ಲೂ ಶನಿವಾರ ಚಪ್ಪಲಿ ಕಳುವಾದರೆ ತುಂಬಾ ಒಳ್ಳೆಯದು ಎನ್ನುತ್ತಾರೆ. ಇದರ ಅರ್ಥ ಶೀಘ್ರದಲ್ಲಿಯೇ ಕೆಟ್ಟಸಮಯ ಕಳೆಯಲಿದೆ ಎಂದು. ಶನಿದೋಷ ಕಳೆದು ಒಳ್ಳೆದಾಗಲಿದೆ ಎನ್ನುವುದರ ಸಂಕೇತವಿದು.

 
ದೇಹದ ಪ್ರತಿಯೊಂದು ಅಂಗಕ್ಕೂ ಗ್ರಹಗಳಿಗೂ ಸಂಬಂಧವಿದೆಯಂತೆ. ಪಾದಗಳನ್ನನು ಶನಿ ಗ್ರಹಕ್ಕೆ ಹೋಲಿಸಲಾಗಿದೆ. ಹಾಗೆ ಚಪ್ಪಲಿಗಳು ಕಳುವಾದರೆ ಅದಕ್ಕೆ ಶನಿಯೇ ಕಾರಣ. ಹಾಗಾಗಿ ಶನಿವಾರ ಚಪ್ಪಲಿ ದಾನ ಮಾಡಿದರೆ ಶನಿ ಪ್ರಸನ್ನನಾಗುತ್ತಾನೆ. ಶೀಘ್ರದಲ್ಲಿಯೆ ಅದೃಷ್ಟದ ದಾರಿ ತೋರಿಸುತ್ತಾನೆ. ಆದ್ದರಿಂದ  ಯಾವುದೇ ಕೆಲಸ ಕೈಗೂಡದೆ ತೊಂದರೆಯಲ್ಲಿದ್ದ ವೇಳೆ ಚಪ್ಪಲಿ ಕಳುವಾದ್ರೆ ದುಃಖ ಪಡುವ ಬದಲು ಖುಷಿಯಾಗಿರಿ. ಇದು ಶನಿ ದೋಷ ನಿವಾರಣೆಯಾಗುತ್ತಿದೆ ಎಂಬುದರ ಮುನ್ಸೂಚನೆ ಎಂಬುದನ್ನು ಮರೆಯಬೇಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾರ್ತಿಕ ಮಾಸದಲ್ಲಿ ಹೀಗೆ ಮಾಡುವುದರಿಂದ ಮೋಕ್ಷ ಸಿಗುವುದು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ ತಪ್ಪದೇ ಮಹಾವಿಷ್ಣುವಿನ ಈ ಮಂತ್ರವನ್ನು 21 ಬಾರಿ ಹೇಳಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಕಾರ್ಯ ಸಿದ್ಧಿಯಾಗಬೇಕಾದರೆ ಗಣಪತಿಯ ಈ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments