Publish Date: Fri, 29 Nov 2024 (08:50 IST)
Updated Date: Fri, 29 Nov 2024 (08:53 IST)
ಬೆಂಗಳೂರು: ಮೀನ ರಾಶಿಯವರಿಗೆ 2025 ರ ಮಾರ್ಚ್ ನಿಂದ ಶನಿ ದೆಶೆಯ ಸಂಕಷ್ಟಗಳು ಶುರುವಾಗಲಿದೆ. ಇದು ಎಷ್ಟು ಸಮಯದವರೆಗೆ ಇದೆ, ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸಲಿದ್ದೀರಿ ಇಲ್ಲಿದೆ ವಿವರ.
2025 ರ ಮಾರ್ಚ್ 29 ರಿಂದ ಶನಿಯು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ. ಈ ಸಂಧರ್ಭದಲ್ಲಿ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ. 2036 ರವರೆಗೂ ನಿಮ್ಮ ಜಾತಕದಲ್ಲಿ ಶನಿಯ ಪ್ರಭಾವವಿರಲಿದೆ.
ಮೀನ ರಾಶಿಯವರಿಗೆ ಸಾಡೇ ಸಾತಿ ಶನಿಯ ಮಧ್ಯಾವಧಿಯಾಗಿರುತ್ತದೆ. ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಾಣಲಿದ್ದೀರಿ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಬಂದೀತು. ಆದರೆ ಇತರೆ ಕುಟುಂಬ ಸದಸ್ಯರ ಬೆಂಬಲವಿರಲಿದೆ. ಉದ್ಯೋಗದ ವಿಚಾರದಲ್ಲಿ ಯಶಸ್ಸು ಸಿಗಬೇಕೆಂದರೆ ಸಾಕಷ್ಟು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಜುಲೈನಿಂದ ನವಂಬರ್ ಅವಧಿಯಲ್ಲಿ ಮಾನಸಿಕ ಒತ್ತಡ, ಆತಂಕ ಕಂಡುಬಂದೀತು.
ಶನಿಯ ಋಣಾತ್ಮಕ ಪ್ರಭಾವದಿಂದ ರಕ್ಷಿಸಿಕೊಳ್ಳಲು ಹನುಮಾನ್ ಚಾಲೀಸಾವನ್ನು ಪಠಿಸುತ್ತಿರಿ. ನಿಯಮಿತವಾಗಿ ಶನಿ ದೇವನ ಪೂಜೆ ಮಾಡುತ್ತಿರಬೇಕು. ಬಡವರಿಗೆ ದಾನ ಧರ್ಮ ಮಾಡುವುದು, ಖಗಗಳಿಗೆ ಆಹಾರ ನೀಡುವ ಮೂಲಕ ಶನಿಯ ಪ್ರಭಾವವನ್ನು ಕಡಿಮೆ ಮಾಡಬಹುದು.