ಬೆಂಗಳೂರು : ದೇವರ ಪೂಜೆಯಲ್ಲಿ ದೀಪಕ್ಕೆ ಮಹತ್ವದ ಸ್ಥಾನವಿದೆ. ತುಪ್ಪ ಅಥವಾ ಎಣ್ಣೆಯ ದೀಪ ಬೆಳಗುವ ಸಂಪ್ರದಾಯ ರೂಢಿಯಲ್ಲಿದೆ. ಪೂಜೆ ವೇಳೆ ಯಾವ ದೀಪ ಹಚ್ಚಬೇಕು. ಎಷ್ಟು ಬತ್ತಿಯನ್ನು ಹಚ್ಚಬೇಕು ಎಂಬುದು ಸರಿಯಾಗಿ ತಿಳಿದುಕೊಳ್ಳಬೇಕು.
ಯಾವುದೇ ರೀತಿಯ ಆರ್ಥಿಕ ಲಾಭಕ್ಕಾಗಿ ನಿಯಮಿತ ರೂಪದಲ್ಲಿ ದೇವರ ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು. ಜಾತಕದಲ್ಲಿ ದೋಷ ಕಂಡು ಬಂದರೆ ಭೈರವನ ಮುಂದೆ ಸಾಸಿವೆ ಎಣ್ಣೆ ದೀಪವನ್ನು ಹಚ್ಚಬೇಕು.
ಭಗವಂತ ಸೂರ್ಯನನ್ನು ಪ್ರಸನ್ನಗೊಳಿಸಲು ಹಾಗೂ ಕೃಪೆಗೆ ಪಾತ್ರರಾಗಲು ಸಾಸಿವೆ ಎಣ್ಣೆ ದೀಪವನ್ನು ಹಚ್ಚುವುದು ಒಳ್ಳೆಯದು.
ಶನಿ, ಎಳ್ಳಿನ ಎಣ್ಣೆಯಲ್ಲಿ ದೀಪ ಹಚ್ಚಿದ್ರೆ ಪ್ರಸನ್ನನಾಗ್ತಾನೆ. ರಾಹು-ಕೇತು ಗ್ರಹ ದೋಷವಿದ್ದರೆ ನಾರಗಸೆ ತೈಲದಿಂದ ದೀಪ ಬೆಳಗಿ.
ಯಾವುದೇ ದೇವಿಯ ಪೂಜೆ ಮಾಡುವ ವೇಳೆ ತುಪ್ಪದ ದೀಪ ಬಳಸಿ.
ಭಗವಂತ ಗಣೇಶನ ಕೃಪೆ ಪ್ರಾಪ್ತಿಗಾಗಿ ಮೂರು ಬತ್ತಿಯ ತುಪ್ಪದ ದೀಪ ಬೆಳಗಿ.
ಕಾರ್ತಿಕ ದೇವರ ಕೃಪೆಗಾಗಿ ಗೋವಿನ ಶುದ್ಧ ತುಪ್ಪದ ದೀಪವನ್ನು ಬಳಸಿ.
ಲಕ್ಷ್ಮಿಯ ಪ್ರಸನ್ನತೆ ಗಳಿಸಲು ಏಳು ಬತ್ತಿಯ ದೀಪವನ್ನು ತುಪ್ಪದಲ್ಲಿ ಹಚ್ಚಿ.
ಭಗವಂತ ವಿಷ್ಣುವಿನ ಕೃಪೆ ಪಡೆಯಲು ಹತ್ತು ಬತ್ತಿಯುಳ್ಳ ದೀಪವನ್ನು ಹಚ್ಚಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ