ಬೆಂಗಳೂರು : ಇಂದು ನವರಾತ್ರಿಯ 6ನೇ ದಿನ. ಈ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸುತ್ತೇವೆ. ಇಂದು ದೇವಿಗೆ ಯಾವ ಹೂಗಳಿಂದ ಹಾಗೂ ಯಾವ ನೈವೇದ್ಯದಿಂದ ಪೂಜಿಸಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
ಇಂದು ದೇವಿಯು ಕಾತ್ಯಾಯಿನಿಯ ದೇವಿಯ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ದೇವಿಗೆ ತುಪ್ಪದ ದೀಪ ಹಚ್ಚಿ ಪೂಜೆ ಮಾಡಿ. ಇದರಿಂದ ದೇವಿ ದುಷ್ಟ ಶಕ್ತಿಗಳನ್ನು ಸಂಹರಿಸಿ ನಿಮ್ಮನ್ನ ರಕ್ಷಿಸುತ್ತಾಳೆ. ಕೆಂಪು ಮತ್ತು ಹಳದಿ ಬಣ್ಣದ ಹೂಗಳಿಂದ ಅದರಲ್ಲೂ ಗುಲಾಬಿ ಹೂ, ಚಂಡು ಹೂಗಳಿಂದ ಅಲಂಕಾರವನ್ನು ಮಾಡಿ. ದೇವಿಗೆ ಪೂಜೆ ಮಾಡುವಾಗ ಕೆಂಪು, ಹಸಿರು ಅಥವಾ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ ಅಥವಾ ಅರ್ಪಿಸಿ ದೇವಿಗೆ ಪೂಜೆ ಮಾಡಿ.
ನೀವು ಇಂದು ದೇವಿಗೆ ಹಾಲಿನಿಂದ ಮಾಡಿದ ಸಿಹಿಯನ್ನು ಹಾಗೂ ಕೇಸರಿಬಾತ್ ನ್ನು ನೈವೇದ್ಯವಾಗಿ ಇಟ್ಟರೆ ಕಾತ್ಯಾಯಿನಿ ದೇವಿಯ ಅನುಗ್ರಹವಾಗುತ್ತದೆ. ನಿಮ್ಮ ಸಮಸ್ಯೆಗಳು ದೂರವಾಗುತ್ತದೆ. ಇಂದು ದೇವಿಯನ್ನು ಪೂಜಿಸುವಾಗ “ಓಂ ಹ್ರೀಂ ಶ್ರೀಂ ಕಾತ್ಯಾಯಿನಿ ದುರ್ಗಾಯೈ ನಮಃ” ಮಂತ್ರವನ್ನು 3, 11, 21, 108 ಬಾರಿ ಪಠಿಸಿ.