Publish Date: Tue, 11 Jun 2019 (07:28 IST)
Updated Date: Tue, 11 Jun 2019 (07:34 IST)
ಬೆಂಗಳೂರು : ಪುರುಷರು ಜೀವನದಲ್ಲಿ ಉದ್ಯೋಗ ಪಡೆಯಲು ತುಂಬಾ ಕಷ್ಟಪಡುತ್ತಾರೆ. ಅವರಿಗೆ ಯೋಗ್ಯತೆ ಇದ್ದರೂ ಅಸಡ್ಯ ಅವರಲ್ಲಿ ಹೆಚ್ಚಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಅವರು ಪ್ರತಿನಿತ್ಯ ಧರಿಸುವ ಈ ವಸ್ತು. ಇದರಿಂದ ದಾರಿದ್ರ್ಯ ಅವರ ಬೆನ್ನುಹತ್ತಿ ಅವರು ಜೀವನದಲ್ಲಿ ಉದ್ಧಾರವಾಗುವುದಿಲ್ಲ.
ಹೌದು. ಒಬ್ಬ ಉದ್ಯೋಗಸ್ಥ ಪುರುಷ ಅಪ್ಪಿತಪ್ಪಿಯೂ ಹರಿದ , ತೂತು ಬಿದ್ದ ಚಪ್ಪಲಿಗಳನ್ನು ಧರಿಸಬಾರದು. ಒಂದು ವೇಳೆ ಆತ ಧರಿಸಿದ್ದೇ ಆದರೆ ರಾಹು ಕೇತು ಅವನ ತಲೆ ಮೇಲೆ ಬಂದು ಕುಳಿತುಕೊಂಡಂತೆ. ಇದರಿಂದ ಅವನಿಗೆ ಅವಮಾನ, ಅಪವಾದ ತಪ್ಪಿದ್ದಲ್ಲ. ಆದ್ದರಿಂದ ನೀವು ಧರಿಸುವ ಚಪ್ಪಲಿಯನ್ನು ಯಾವಾಗಲೂ ಶುಚಿಯಾಗಿಟ್ಟುಕೊಳ್ಳಿ. ಹಾಗೇ ಹರಿದ ತೂತು ಬಿದ್ದ ಚಪ್ಪಲಿಯನ್ನು ಎಂದಿಗೂ ಧರಿಸಬೇಡಿ.