Publish Date: Wed, 11 Nov 2020 (06:11 IST)
Updated Date: Wed, 11 Nov 2020 (06:13 IST)
ಬೆಂಗಳೂರು : ಗ್ರಹಗಳು ಕೂಡ ನಮ್ಮ ಆರೋಗ್ಯವನ್ನು ನಿಯಂತ್ರಿಸುತ್ತವೆ. ಆದಕಾರಣ ನೀವು ಯಾವುದೇ ಅನಾರೋಗ್ಯಕ್ಕೆ ಒಳಗಾದರೆ ಜಾತಕ ಹಾಗೂ ಜ್ಯೋತಿಷ್ಯದ ಮೂಲಕ ದೋಷಪೂರಿತ ಗ್ರಹಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಹಾಗಾದ್ರೆ ಶುಕ್ರಗ್ರಹ ದುರ್ಬಲವಾದರೆ ನಿಮಗೆ ಯಾವ ಸಮಸ್ಯೆ ಕಾಡುತ್ತದೆ. ಅದಕ್ಕೆ ಪರಿಹಾರವೇನು ಎಂಬುದನ್ನು ತಿಳಿದುಕೊಳ್ಳಿ.
ನಿಮ್ಮ ಜಾತಕದಲ್ಲಿ ಶುಕ್ರ ಗ್ರಹ ದುರ್ಬಲವಾಗಿದ್ದರೆ ನೀವು ಮುಖ, ದೃಷ್ಟಿ, ಮೂತ್ರಪಿಂಡ, ಗರ್ಭಾಶಯಕ್ಕೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಈ ಸಮಸ್ಯೆ ನಿವಾರಿಸಲು ಈ ಪರಿಹಾರವನ್ನು ಮಾಡಿ. ತೊಳೆಯದ ಬಟ್ಟೆಗಳನ್ನು ಧರಿಸಬೇಡಿ. ನಿಮ್ಮ ಕೈಚೀಲದಲ್ಲಿ ಬೆಳ್ಳಿಯ ಪೀಸ್ ನ್ನು ಇಟ್ಟುಕೊಳ್ಳಿ. ವಿಧವೆಯರು ಮತ್ತು ಹಿರಿಯರಿಗೆ ಸಿಹಿತಿಂಡಿಗಳನ್ನು ದಾನ ಮಾಡಿ. ಮನೆಯಲ್ಲಿ ಹಸುವಿನ ತುಪ್ಪ ತಯಾರಿಸಿ ದೇವಾಲಯಗಳಿಗೆ ದಾನ ಮಾಡಿ.