Publish Date: Tue, 27 Feb 2024 (08:40 IST)
Updated Date: Tue, 27 Feb 2024 (08:43 IST)
ಬೆಂಗಳೂರು: ಪ್ರತಿಯೊಂದು ರಾಶಿಯವರಿಗೂ ಅದೃಷ್ಟದ ಸಂಖ್ಯೆ ಮತ್ತು ಬಣ್ಣ ಎಂಬುದೊಂದಿರುತ್ತದೆ. ಇಂದು ಮೀನ ರಾಶಿಯವರ ಅದೃಷ್ಟದ ಸಂಖ್ಯೆ ಮತ್ತು ಬಣ್ಣ ಯಾವುದು ಎಂದು ನೋಡೋಣ.
ಮೀನ ರಾಶಿಯವರ ಗುಣ ಸ್ವಭಾವಗಳು
ಮೀನ ಎಂದರೇ ಪಕ್ಕನೇ ನೆನಪಾಗುವುದು ಚಂಚಲ ಸ್ವಭಾವ ಎಂದು. ಈ ರಾಶಿಯವರು ಅದೇ ರೀತಿ ಇರುತ್ತಾರೆ. ಜೊತೆಗೆ ಇವರ ಕಲ್ಪನೆಗಳು ಅದ್ಭುತವಾಗಿರುತ್ತದೆ. ಇನ್ನೊಬ್ಬರ ಬಗ್ಗೆ ಕಾಳಜಿ, ಪ್ರೀತಿ ಮಾಡುವುದರಲ್ಲಿ ಇವರನ್ನು ಮೀರಿಸುವವರಿಲ್ಲ. ಭಾವನಾತ್ಮಕವಾಗಿ ಇತರರಿಗೆ ಸ್ಪಂದಿಸುವ ಗುಣ ಸ್ವಭಾವದವರು. ಆದರೆ ತಮ್ಮ ವರ್ತನೆ ಅಥವಾ ಕೆಲಸದ ಪರಿಣಾಮ ಏನಾಗಬಹುದೋ ಎಂದು ಚಿಂತೆ ಮಾಡುವುದು ಹೆಚ್ಚು. ಟೀಕೆಗಳಿಗೆ ಬೇಗನೇ ಮರುಗುತ್ತಾರೆ. ಆದರೆ ಇವರ ಅತಿಯಾದ ಚಿಂತೆ ಮಾಡುವ ಗುಣವೇ ಇವರಿಗೆ ಮುಳುವಾಗಬಹುದು. ಇವರನ್ನು ಭಾವನಾತ್ಮಕವಾಗಿ ನಿಭಾಯಿಸುವುದು ಕಷ್ಟ ಎನಿಸಬಹುದು. ಕೆಲವರು ಆಲಸಿಗಳೂ ಆಗಿರುತ್ತಾರೆ. ತಮ್ಮ ಸುತ್ತಲಿರುವವರ ಮಾತಿಗೆ ಮರುಳಾಗುವುದು ಜಾಸ್ತಿ. ಇದು ಇವರ ಋಣಾತ್ಮಕ ಅಂಶಗಳು.
ಅದೃಷ್ಟ ಸಂಖ್ಯೆ ಮತ್ತು ಬಣ್ಣ
ಮೀನ ರಾಶಿಯವರ ಅದೃಷ್ಟದ ಸಂಖ್ಯೆ 3,7,9 ಸಂಖ್ಯೆಗಳು ಅದೃಷ್ಟ ತರುತ್ತವೆ. ಅಲ್ಲದೆ, 0,4, 12 ಮತ್ತು 15 ಸಂಖ್ಯೆಗಳಿಂದಲೂ ತೊಂದರೆಯೇನೂ ಇಲ್ಲ. ಈ ಸಂಖ್ಯೆಗೆ ಅನುಗುಣವಾಗಿ ಏನಾದರೂ ಕೆಲಸಕ್ಕೆ ಕೈ ಹಾಕಿದರೆ ಯಶಸ್ಸು ಪಡೆಯಬಹುದು. ಅದೇ ರೀತಿ ಮಂಗಳವಾರ, ಗುರುವಾರ ಮತ್ತು ಭಾನುವಾರ ಇವರಿಗೆ ಅದೃಷ್ಟದ ದಿನವಾಗಿರುತ್ತದೆ. ಈ ರಾಶಿಯವರಿಗೆ ಅದೃಷ್ಟ ತರುವ ಬಣ್ಣವೆಂದರೆ ಸಮುದ್ರ ನೀಲ.