ಬೆಂಗಳೂರು : ಮನೆಯ ಮುಖ್ಯ ದ್ವಾರ ಅದೃಷ್ಟದ ಬಾಗಿಲು ಇದ್ದ ಹಾಗೆ. ಅದು ಮನೆಗೆ ಸಂಪತ್ತು, ನೆಮ್ಮದಿ, ಶಾಂತಿಯನ್ನು ತರುವ ಬಾಗಿಲು ಕೂಡ ಆಗಿದೆ. ಆದ್ದರಿಂದ ಅದನ್ನು ನಿರ್ಮಿಸುವಾಗ ಈ ಕೆಳಗಿರುವ ವಾಸ್ತು ನಿಯಮದ ಪ್ರಕಾರ ನಿರ್ಮಿಸಿದರೆ ಉತ್ತಮ.
*ಇಳಿಜಾರು, ಬದಿಗೆ ಸರಿದ ಅಥವಾ ವೃತ್ತಾಕಾರವನ್ನು ಮುಖ್ಯ ದ್ವಾರ ಹೊಂದಿರಬಾರದು.
*ಇನ್ನೊಂದು ಮನೆಯ ಮುಖ್ಯ ದ್ವಾರಕ್ಕೆ ನೇರವಾಗಿ ಇದು ಇರಬಾರದು.
* ಕಾಂಪೌಂಡ್‌ಗೆ ನೇರವಾಗಿ ಮುಖ್ಯ ದ್ವಾರ ಇರುವುದು ಸೂಕ್ತವಲ್ಲ.
* ಮುಖ್ಯ ದ್ವಾರವು ಸಂಪು, ಸೆಪ್ಟಿಕ್ ಟ್ಯಾಂಕ್ ಮೊದಲಾದವುಗಳ ಮೇಲಿರಬಾರದು.
* ಇತರ ಕಟ್ಟಡ ಇಲ್ಲವೇ ಮರಗಳ ನೆರಳು ಅದರ ಮೇಲೆ ಬೀಳಬಾರದು.
*ಸ್ವಯಂಚಾಲಿತವಾಗಿ ತೆರೆಯುವ-ಮುಚ್ಚಿಕೊಳ್ಳುವ ಬಾಗಿಲು ಬೇಡ.
*ಯಾವುದೇ ಗೋಡೆಯ ಸರಿ ಮಧ್ಯ ಭಾಗದಲ್ಲಿ ಮುಖ್ಯ ದ್ವಾರ ಇರುವುದು ಬೇಡ.
*ಒಂದನ್ನೊಂದು ಹಾಯುವ ರಸ್ತೆಗೆ ಮುಖ ಮಾಡಿ ಮುಖ್ಯ ದ್ವಾರ ನಿರ್ಮಿಸಬೇಡಿ.
*ಮುಖ್ಯ ಬಾಗಿಲಿಗೆ ಕಪ್ಪು ಬಣ್ಣ ಬಳಿಯಬೇಡಿ.
*ದೇವಾಲಯ ಅಥವಾ ಯಾವುದೇ ಧಾರ್ಮಿಕ ಕೇಂದ್ರಕ್ಕೆ ನೇರವಾಗಿ ಇರಬಾರದು.
* ಕಂಬ, ಮರ, ವಯರ್ ಮೊದಲಾದವು ಮುಖ್ಯ ದ್ವಾರದ ಎದುರು ಇರುವುದು ಬೇಡ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ