ಆಷಾಢ ಮಾಸದಲ್ಲಿ ಹೊಸ ಜೋಡಿ ಅಥವಾ ನವದಂಪತಿಗಳು ಸಂಸಾರ ನಡೆಸಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆ ಆಚಾರ ಈಗಲೂ ಕೂಡ ಕೆಲವುಕಡೆ ಆಚರಣೆಯಲ್ಲಿದೆ. ಇದರ ಹಿಂದೆ ಒಂದು ಮುಖ್ಯವಾದ ಕಾರಣವಿದೆ.
ಆಷಾಢ ಮಾಸದಲ್ಲಿ ವಾತಾವರಣದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ತಣ್ಣಗಿನ ವಾತಾವರಣದ ಕಾರಣ ಬ್ಯಾಕ್ಟೀರಿಯಾ, ವೈರಸ್‍ಗಳಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ. ಇದನ್ನು ಅನಾರೋಗ್ಯ ಮಾಸ ಎಂದೂ ಕರೆಯುತ್ತಾರೆ. ಗಾಳಿಯ ಜತೆಗೆ ಮಳೆಯೂ ಸುರಿಯುತ್ತಿರುತ್ತದೆ. ಕಾಲುವೆಗಳಲ್ಲಿ, ನದಿಗಳಲ್ಲಿ ಪ್ರವಹಿಸುವ ನೀರು ಸ್ವಚ್ಛವಾಗಿರಲ್ಲ. ಮಾಲಿನ್ಯದಿಂದ ಕೂಡಿದ ನೀರಿನಿಂದ ಅನಾರೋಗ್ಯ ಸಮಸ್ಯೆಗಳು ತಲೆಯೆತ್ತುತ್ತವೆ.
ಈ ರೀತಿಯ ಸಮಯದಲ್ಲಿ ಹೊಸ ಮದುಮಗಳು ಗರ್ಭಿಣಿಯಾದರೆ ಹುಟ್ಟಲಿರುವ ಮಗು ಮೇಲೆ ಅದರ ಪ್ರಭಾವ ಇರುತ್ತದೆಂಬುದು ಶಾಸ್ತ್ರೀಯ ನಂಬಿಕೆ. ಭ್ರೂಣಕ್ಕೆ ಮೊದಲ ಮೂರು ತಿಂಗಳು ಬಹಳ ಮುಖ್ಯ. ಆ ಸಮಯದಲ್ಲಿ ಅವಯವಗಳು ರೂಪುಗೊಳ್ಳುವ ಪ್ರಕ್ರಿಯೆ ಆರಂಭವಾಗಿರುತ್ತದೆ. ಆದಕಾರಣ ಈ ತಿಂಗಳಲ್ಲಿ ವಧು ತವರುಮನೆಯಲ್ಲಿ ಇರುವುದೇ ಕ್ಷೇಮ ಎಂದು ಹಿರಿಯರು ಆಚಾರವನ್ನಿಟ್ಟರು.