Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಮ್ಮ ಜಾತಕದಲ್ಲಿ ಗುರುಬಲವಿದೆಯೇ ಎಂಬುದನ್ನು ತಿಳಿಯಿರಿ

ನಿಮ್ಮ ಜಾತಕದಲ್ಲಿ ಗುರುಬಲವಿದೆಯೇ ಎಂಬುದನ್ನು ತಿಳಿಯಿರಿ
bangalore , ಮಂಗಳವಾರ, 12 ಡಿಸೆಂಬರ್ 2023 (14:44 IST)
ಲಗ್ನದಲ್ಲಿ ಗುರುವಿದ್ದರೆ ಜಾತಕನು ಸೌಂದರ್ಯವಂತನೂ,ದಾನ ಧರ್ಮಾದಿಗಳಲ್ಲಿ ಆಸಕ್ತಿ ಹೊಂದಿದವನೂ ಆಗಿದ್ದು, ದೀರ್ಘಾಯಸ್ಸು ಹೊಂದುವುದರ ಜೊತೆಗೆ ಸುಖಜೀವನ ನಡೆಸುತ್ತಾನೆ.
 
ಪ್ರತಿಯೊಬ್ಬನಿಗೂ ಗುರು ಬಲವೆಂಬುದು ಒಂದು ವಿಶಿಷ್ಟವಾದ ಸಾಧನೆಗೆ ಪೂರಕವಾದ ಅಂಶ. ಧನಕಾರಕ, ಜ್ಞಾನಕಾರಕ, ಪುತ್ರಕಾರನೂ ಆದ ಗುರುವು ಮಾನವನ ಜೀವನದ ಪ್ರಮುಖ ಅಂಶಗಳನ್ನು ನಿರ್ಣಯಿಸುವ ಪ್ರಭಾವಿ ಗ್ರಹವೆಂದರೂ ತಪ್ಪಲ್ಲ. ಹಾಗಾಗಿ ಗುರುವು ಜಾತಕದ ಕೇಂದ್ರಸ್ಥಾನವೆಂದು ಕರೆಯಲ್ಪಡುವ ಲಗ್ನ,ಚತುರ್ಥ,ಸಪ್ತಮ,ದಶಮ ಭಾವಗಳಲ್ಲಿ ಇದ್ದರೆ ಎಲ್ಲಾ ಬಗೆಯ ದೋಷವನ್ನೂ ನಾಶಮಾಡುತ್ತಾನೆ ಎಂಬ ಅಭಿಪ್ರಾಯ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ವ್ಯಕ್ತವಾಗಿವೆ.
 
ಅದೇ ರೀತಿ ದ್ವಿತೀಯದಲ್ಲಿದ್ದಾಗ ಸದ್ವಿಚಾರವಂತನೂ,ವಾಕ್ಚಾತುರ್ಯ ಹೊಂದಿದವನೂ,ಧನವಂತನೂ ಆಗಿದ್ದು ಶಾಸ್ತ್ರಗಳ ಅಧ್ಯಯನ ತತ್ಪರನಾಗಿರುತ್ತಾನೆ. ತೃತೀಯದಲ್ಲಿ ಗುರುವಿದ್ದರೆ ಉತ್ತಮ ಸಹೋದರನನ್ನು ಹೊಂದಿದ್ದರೂ ಪಾಪಕರ್ಮಗಳಲ್ಲಿ ನಿರತನಾಗಿದ್ದು ಜ್ಞಾನಹೀನನೂ, ಜಿಪುಣನೂ ಆಗುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ. ಚತುರ್ಥದಲ್ಲಿ ಗುರುವಿದ್ದರೆ ಎಲ್ಲಾ ಬಗೆಯ ಪ್ರಾಪಂಚಿಕ ಸುಖ ಹೊಂದುವವನೂ,ತಾಯಿ,ಸಂಬಂಧಿಕರಲ್ಲಿ ಪ್ರೀತಿ ಉಳ್ಳವನೂ ಆಗುತ್ತಾನೆ.
 
ಪಂಚಮದಲ್ಲಿ ಗುರುವಿದ್ದಾಗ ಸಮಾಜದಲ್ಲಿ ಉತ್ತಮಸ್ಥಾನ ಗಳಿಸುವುದರ ಜೊತೆಗೆ ಉನ್ನತ ಅಧಿಕಾರವನ್ನು ಅನುಭವಿಸುತ್ತಾನೆ.ಆದರೆ ಪುತ್ರ ವರ್ಗದಿಂದ ಅತಿಶಯವಾದ ದುಃಖ ಅನುಭವಿಸುತ್ತಾನೆ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?