ಬೆಂಗಳೂರು : ಪ್ರತಿಯೊಬ್ಬರು ದೇವಸ್ಥಾನಕ್ಕೆ ಹೋಗುತ್ತಾರೆ. ಅಲ್ಲಿ ದೇವರ ಅನುಗ್ರಹ ಪಡೆಯಲು ಪೂಜೆ, ಅರ್ಚನೆ, ಹೋಮ ಹವನಗಳನ್ನು ಮಾಡಿಸುತ್ತಾರೆ. ಆದರೆ ಅದರ ಜೊತೆಗೆ ಕೆಲವು ನಿಯಮಗಳನ್ನು ಪಾಲಿಸಬೇಕು. ಅದು ಏನೆಂಬುದನ್ನು ತಿಳಿದುಕೊಳ್ಳೋಣ.
ಪ್ರತಿಯೊಬ್ಬರು ದೇವಸ್ಥಾನಕ್ಕೆ ಹೋದಾಗ ಮೊದಲಿಗೆ ದೇವರ ಮುಂದೆ ಇರುವ ಧ್ವಜ ಸ್ತಂಭವನ್ನು ದರ್ಶನ ಮಾಡಬೇಕು. ಹಾಗೇ ಶಿವಾಲಯಕ್ಕೆ ಹೋದಾಗ ಮೊದಲಿಗೆ ನವಗ್ರಹವನ್ನು ಪ್ರದರ್ಶನೆ ಮಾಡಿ ಕಾಲನ್ನು ತೊಳೆದುಕೊಂಡು ನಂತರ ಶಿವನ ದರ್ಶನವನ್ನು ಪಡೆಯಬೇಕು.
ಅದೇ ವಿಷ್ಣು ದೇವಾಲಯಕ್ಕೆ ಹೋದಾಗ ಮೊದಲಿಗೆ ವಿಷ್ಣು ದೇವರ ದರ್ಶನ ಮಾಡಿ ನಂತರ ಬೇರೆ ದೇವರ ದರ್ಶನ ಪಡೆಯಬೇಕು. ಹಾಗೇ ಯಾವುದೇ ದೇವರ ವಿಗ್ರಹವನ್ನು ದರ್ಶನ ಮಾಡುವ ಮೊದಲು ದೇವರ ಪಾದವನ್ನು ದರ್ಶನ ಮಾಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.