ಬೆಂಗಳೂರು : ನಾವು ಏನಾದರೂ ತಪ್ಪಾಗಿ ಹೇಳಬಾರದ ಮಾತನ್ನು, ಹೇಳಬಾರದ ಸಂದರ್ಭದಲ್ಲಿ ಹೇಳಿದಾಗ ದೇವತೆಗಳು ಕೇಳಿಸಿಕೊಂಡರೆ ತಕ್ಷಣ ತಥಾಸ್ತು ಎನ್ನುತ್ತಾರೆ. ಆದ್ದರಿಂದ ಯಾವಾಗಲೂ ಒಳ್ಳೆಯದನ್ನೇ ಮಾತನಾಡಬೇಕು ಎಂದು ನಮ್ಮ ಹಿರಿಯರು ಹೇಳುವುದನ್ನು ನಾವು ಗಮನಿಸಿರಬಹುದು.
ಜೋತಿಷ್ಯಶಾಸ್ತ್ರದ ಪ್ರಕಾರ ಇದು ನಿಜವಂತೆ. ಸಂಜೆ ಸಮಯದಲ್ಲಿ ತಥಾಸ್ತು ದೇವತೆಗಳು ಸಂಚರಿಸುತ್ತಾರಂತೆ. ಆದ್ದರಿಂದ ನಾವು ಯಾವಾಗಲೂ ನಮ್ಮ ಮನಸ್ಸಿನಲ್ಲಿ ಒಳ್ಳೆಯದನ್ನು ಕೇಳಿಕೊಂಡರೆ ಅದು ಹಾಗೆಯೇ ನಡೆಯುತ್ತದೆಯಂತೆ. ಹಾಗೇ ಕೆಟ್ಟದನ್ನು ಕೇಳಿಕೊಂಡರೆ ಅದು ಹಾಗೆಯೇ ನಡೆದು ನಾವು ಕಷ್ಟಗಳನ್ನು ಎದುರಿಸಬೇಕಾಗುತ್ತದೆಯಂತೆ. ಆದ್ದರಿಂದ ಸಂಜೆ ವೇಳೆ ಒಳ್ಳೆಯದನ್ನೇ ಯೋಚಿಸಿ ಎಂದು ಜ್ಯೋತಿಷ್ಯರು ಹೇಳುತ್ತಾರೆ.
ಹಾಗೆಯೇ ಹೆಚ್ಚಿನವರು ತಮ್ಮ ಬಳಿ ಹಣವಿದ್ದರೂ ಯಾವಾಗಲೂ ಹಣವಿಲ್ಲವೆಂದು ಹೇಳುತ್ತಿರುತ್ತಾರೆ. ಇನ್ನು ಕೆಲವರು ಆರೋಗ್ಯ ಚೆನ್ನಾಗಿದ್ದರೂ, ಹುಷಾರಿಲ್ಲವೆಂದು ಸುಮ್ಮನೇ ಹೇಳುತ್ತಿರುತ್ತಾರೆ. ಇಂತಹ ಮಾತುಗಳಿಗೆ ತಥಾಸ್ತು ದೇವತೆಗಳು ತಥಾಸ್ತು ಎಂದರೆ ಅದು ಹಾಗೆಯೇ ಆಗುತ್ತದೆಯಂತೆ. ಆದ್ದರಿಂದ ನಿಮಗೆ ಬೇರೆಯವರಿಗೆ ಹಣ ನೀಡಲು ಇಷ್ಟವಿರದಿದ್ದರೆ ಹಣ ನೀಡಲು ಆಗುವುದಿಲ್ಲ ಎಂದು ಹೇಳಿ ಅದರ ಬದಲು ಹಣವಿಲ್ಲವೆಂದು ಮಾತ್ರ ಹೇಳಬೇಡಿ ಎಂದು ಜ್ಯೋತಿಷ್ಯರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ