Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಹಣ, ಬಟ್ಟೆಗಳನ್ನು ಇಡಲು ಬೀರುಗಳನ್ನು ಬಳಸುತ್ತಾರೆ. ಹೆಚ್ಚಾಗಿ ಬೀರುಗಳಲ್ಲಿ ಕನ್ನಡಿಯನ್ನು ಫಿಕ್ಸ್ ಮಾಡಲಾಗುತ್ತದೆ. ಆದರೆ ವಾಸ್ತು ಪ್ರಕಾರ ಇದು ಶುಭವೇ? ಅಶುಭವೇ? ಎಂಬುದನ್ನು ತಿಳಿದುಕೊಳ್ಳಿ.
ವಾಸ್ತು ಪ್ರಕಾರ ಈ ಬೀರುಗಳು ಉತ್ತಮವಲ್ಲ. ಯಾಕೆಂದರೆ ಬೀರುಗಳನ್ನು ಇಡಲು ದಕ್ಷಿಣ ಅಥವಾ ಪಶ್ಚಿಮ ದಿಕ್ಕು ಉತ್ತಮ. ಹಾಗೇ ಪೂರ್ವ ಅಥವಾ ಉತ್ತರ ದಿಕ್ಕನ್ನು ಕನ್ನಡಿ ಹಾಕಲು ಉತ್ತಮವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಕನ್ನಡಿ ಹೊಂದಿರುವ ಬೀರುಗಳನ್ನು ಬಳಸುವುದು ಒಳ್ಳೆಯದಲ್ಲ ಎನ್ನಲಾಗುತ್ತದೆ. ಇದು ನಕರಾತ್ಮಕತೆಯ ಸಂಕೇತವಾಗಿದ್ದು, ಅದು ನಿಮ್ಮ ಹಣಕಾಸಿನ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ, ನಿಮ್ಮ ಆದಾಯ ಕಡಿಮೆಯಾಗುತ್ತದೆ.