ಬೆಂಗಳೂರು : ಚರ್ಮ ರೋಗಕ್ಕೆ ಅನೇಕ ವೈದ್ಯರ ಬಳಿ ಚಿಕಿತ್ಸೆ ಪಡೆದು ವಾಸಿಯಾಗದಿದ್ದರೆ ಅಂತವರು ಶ್ರೀ ನೆಲ್ಲಿ ತೀರ್ಥ ಸೋಮೇಶ್ವರ ಗುಹಾಂತರ ದೇವಾಲಯಕ್ಕೆ ಭೇಟಿ ನೀಡಿ.
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಳಿಯಿರುವ ಈ ನೆಲ್ಲಿ ತೀರ್ಥ ಸೋಮೇಶ್ವರ ದೇವಾಲಯ ಬಹಳ ವಿಶಿಷ್ಟವಾಗಿದೆ. ಈ ದೇವಾಲಯ ಅತ್ಯಂತ ಪ್ರಾಚೀನವಾದ ಸುಮಾರು 1487 ಕ್ಕಿಂತ ಪುರಾತನವಾದುದು ಎಂದು ಹೇಳಲಾಗುತ್ತಿದೆ. ಇಲ್ಲಿ ಒಂದು ಗುಹೆಯಿದ್ದು ಅದರ ಒಳಗೆ ನೆಲ್ಲಿಕಾಯಿ ಗಾತ್ರದ ನೀರು ಸದಾ ಬರುತ್ತಿರುತ್ತದೆ. ಆದ್ದರಿಂದ ಇದಕ್ಕೆ ನೆಲ್ಲಿ ತೀರ್ಥ ಎಂದು ಹೆಸರು ಬಂದಿದೆ.
ಇದು ಸುಮಾರು ೨೦೦ ಮೀಟರ್ ಉದ್ದವಿರುವ ಈ ಗುಹೆಯೊಳಗೆ ಹೋಗಲು ನೀರಿನಲ್ಲಿ ಹೋಗಬೇಕು ಒಳಗೆ ವಿಶಾಲವಾದ ಸರೋವರೋಪಾದಿಯಲ್ಲಿದ್ದು ಇಲ್ಲಿರುವ ಮಣ್ಣನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ಚರ್ಮ ರೋಗಗಳು ವಾಸಿಯಾಗುತ್ತವೆ ಎಂಬ ಪ್ರತೀತಿ ಇದೆ ಮತ್ತು ಗುಹೆಯಿಂದ ಹೊರಗಡೆ ಬರುವಾಗ ಶಿವಲಿಂಗಕ್ಕೆ ಪೂಜೆ ಸಲ್ಲಿಸಿ ಬರಬಹುದಾಗಿದೆ.
ಇಲ್ಲಿ ಸಾಮಾನ್ಯವಾಗಿ ಮಳೆಗಾಲದಲ್ಲಿ ಈ ಗುಹಾಲಯದ ಒಳಗೆ ಭಕ್ತರಿಗೆ ಪ್ರವೇಶವನ್ನು ನಿಷೇದಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.