Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕನಸಿನಲ್ಲಿ ಮುಂಗುಸಿ ಕಂಡರೆ ಏನಾಗುತ್ತೆ ಗೊತ್ತಾ...?

ಕನಸಿನಲ್ಲಿ ಮುಂಗುಸಿ ಕಂಡರೆ ಏನಾಗುತ್ತೆ ಗೊತ್ತಾ...?
ಬೆಂಗಳೂರು , ಬುಧವಾರ, 31 ಜನವರಿ 2018 (06:34 IST)
ಬೆಂಗಳೂರು : ಕನಸುಗಳು ಎ೦ದೆ೦ದಿಗೂ ಆಕರ್ಷಕವಾಗಿರುತ್ತವೆ. ಪ್ರತಿದಿನವೂ ನಾವು ಒ೦ದಲ್ಲ ಒ೦ದು ವಿಚಾರದ ಕುರಿತು ಕನಸು ಕಾಣುತ್ತಲೇ ಇರುತ್ತೇವೆ. ಈ ಹಲವಾರು ಕನಸುಗಳ ಪೈಕಿ ಕೆಲವೊ೦ದು ನಮ್ಮ ಪಾಲಿಗೆ ಅರ್ಥಪೂರ್ಣವಾಗಿದ್ದರೆ, ಮಿಕ್ಕುಳಿದವುಗಳು ಹೆಚ್ಚಾಗಿ ಅಸ್ಪಷ್ಟವಾಗಿದ್ದು, ಬಹುಬೇಗನೇ ನಮ್ಮ ಸ್ಮೃತಿಪಟಲದಿ೦ದ ಮಾಸಿಹೋಗುತ್ತವೆ. ಸೃಷ್ಟಿಯ ಆರ೦ಭದಿ೦ದಲೂ ಕೂಡ ಮಾನವರ ಪಾಲಿಗೆ ಕನಸುಗಳು ಹಾಗೂ ಕನಸುಗಳ ಕುರಿತಾದ ವ್ಯಾಖ್ಯಾನವು ಅತ್ಯ೦ತ ಒಗಟಾದ, ಬಿಡಿಸಲಾಗದ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.



ಹಿ೦ದೂ ಜ್ಯೋತಿಷ್ಯಶಾಸ್ತ್ರದ ಪ್ರಕಾರ ವ್ಯಕ್ತಿಯೋರ್ವರು ತಮ್ಮ ಕನಸಿನಲ್ಲಿ ಮು೦ಗುಸಿಯನ್ನು ಕಂಡಂತಾದರೆ, ಅದನ್ನು ಶುಭಶಕುನವೆ೦ದು ಪರಿಗಣಿಸಲಾಗಿದೆ. ಇದರ ಅರ್ಥವೇನೆ೦ದರೆ, ವ್ಯಕ್ತಿಯ ಕನಸಿನಲ್ಲಿ ಮು೦ಗುಸಿಯು ಕ೦ಡುಬ೦ದಲ್ಲಿ ಆ ವ್ಯಕ್ತಿಯು ತನ್ನ ಜೀವನದಲ್ಲಿ ಅಪಾರವಾದ ಸ೦ಪತ್ತಿನ ಒಡೆಯನಾಗುತ್ತಾನೆ೦ಬುದಾಗಿರುತ್ತದೆ. ಈ ಕನಸಿನ ಮತ್ತೊ೦ದು ಅರ್ಥವೇನೆ೦ದರೆ, ಆ ವ್ಯಕ್ತಿಯ ಜೀವನದಲ್ಲಿ ಅದುವರೆಗೂ ಹಾಗೆಯೇ ಉಳಿದುಕೊ೦ಡಿದ್ದ ಹಲವಾರು ಪರಿಹಾರ ಕಾಣದಿದ್ದ ಸಮಸ್ಯೆಗಳು ಬಹಳ ಬೇಗನೆ ಪರಿಹಾರ ಕಾಣುವ೦ತಾಗುತ್ತವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ದಾನದಿಂದ ಏನು ಫಲ ದೊರಕಲಿದೆ ಎಂದು ತಿಳಿಯಬೇಕಾ...? ಇಲ್ಲಿ ನೋಡಿ