ಬೆಂಗಳೂರು : ಪರ್ಸ್ ಇರುವುದೇ ಹಣವನ್ನು ಇಟ್ಟುಕೊಳ್ಳಲು. ಆದರೆ ಈ ಪರ್ಸ್ ನಲ್ಲಿ ಯಾವಾಗಲೂ ಹಣ ತುಂಬಿಕೊಂಡಿರಬೇಕೆಂದರೆ ಪರ್ಸ್ ನಲ್ಲಿ ನಿಮ್ಮ ರಾಶಿಗನುಗುಣವಾಗಿ ನಾಣ್ಯಗಳನ್ನು ಇಟ್ಟುಕೊಂಡಿರಬೇಕು. ಪ್ರತಿಯೊಂದು ರಾಶಿಗೂ ಬೇರೆ ಬೇರೆ ಲೋಹ ಶುಭ ಫಲ ನೀಡುತ್ತವೆ. ಹಾಗಾಗಿ ರಾಶಿಗನುಗುಣವಾಗಿ ಆ ಲೋಹದ ನಾಣ್ಯಗಳನ್ನು ಪರ್ಸಿನಲ್ಲಿ ಇಟ್ಟುಕೊಂಡರೆ ಎಂದೂ ಪರ್ಸ್ ಖಾಲಿಯಾಗುವುದಿಲ್ಲ.
ಮೇಷ : ಈ ರಾಶಿಯವರು ಪರ್ಸ್ ನಲ್ಲಿ ತಾಮ್ರದ ನಾಣ್ಯವನ್ನು ಇಟ್ಟುಕೊಳ್ಳಬೇಕು.
ವೃಷಭ : ಈ ರಾಶಿಯವರು ಸದಾ ಪರ್ಸ್ ನಲ್ಲಿ ಬೆಳ್ಳಿ ನಾಣ್ಯವನ್ನು ಇಟ್ಟಿರಬೇಕು.
ಮಿಥುನ : ಮಿಥುನ ರಾಶಿಯವರು ಪರ್ಸ್ ನಲ್ಲಿ ಯಾವಾಗ್ಲೂ ಕಂಚಿನ ನಾಣ್ಯವನ್ನು ಇಟ್ಟುಕೊಳ್ಳುವುದು ಶುಭ.
ಕರ್ಕ : ಈ ರಾಶಿಯವರು ಬೆಳ್ಳಿ ನಾಣ್ಯವನ್ನು ಪರ್ಸ್ ನಲ್ಲಿಟ್ಟುಕೊಂಡರೆ ಮಂಗಳಕರ.
ಸಿಂಹ : ಈ ರಾಶಿಯವರು ಪರ್ಸ್ ನಲ್ಲಿ ಬೆಳ್ಳಿ ಅಥವಾ ಕಂಚಿನ ನಾಣ್ಯಗಳಲ್ಲಿ ಒಂದನ್ನು ಇಟ್ಟುಕೊಳ್ಳಬಹುದು.
ಕನ್ಯಾ : ಕನ್ಯಾ ರಾಶಿಯವರು ಪರ್ಸ್ ನಲ್ಲಿ ಬೆಳ್ಳಿ ನಾಣ್ಯವನ್ನು ಇಡಬೇಕು.
ತುಲಾ : ಈ ರಾಶಿಯವರು ಕೂಡ ಪರ್ಸ್ ನಲ್ಲಿ ಬೆಳ್ಳಿ ನಾಣ್ಯವನ್ನಿಟ್ಟುಕೊಂಡರೆ ಶುಭಕರ.
ವೃಶ್ಚಿಕ : ಇವ್ರು ಸದಾ ತಾಮ್ರದ ನಾಣ್ಯವನ್ನು ಇಟ್ಟುಕೊಳ್ಳಬೇಕು.
ಧನು : ಈ ರಾಶಿಯವರು ಪರ್ಸ್ ನಲ್ಲಿ ಕಂಚಿನ ನಾಣ್ಯವನ್ನು ಇಡಬೇಕು.
ಮಕರ : ಕಬ್ಬಿಣದ ನಾಣ್ಯವನ್ನು ಪರ್ಸ್ ನಲ್ಲಿಟ್ಟುಕೊಂಡರೆ ಶುಭಕರ.
ಕುಂಭ : ಕಂಚಿನ ನಾಣ್ಯ ಪರ್ಸ್ ನಲ್ಲಿದ್ದರೆ ಮಂಗಳಕರ.
ಮೀನ : ಮೀನ ರಾಶಿಯವರ ಪರ್ಸ್ ನಲ್ಲಿ ಸದಾ ಚಿನ್ನದ ಅಥವಾ ಹಿತ್ತಾಳೆಯ ನಾಣ್ಯವಿರಬೇಕು
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.