ಬೆಂಗಳೂರು :ದೀಪಾವಳಿ ಅವಮಾಸ್ಯೆ ಮುಗಿದ ಬಳಿಕ ಬರುವ ಮೊದಲ ದಿನವನ್ನು ಕಾರ್ತಿಕ ಮಾಸವೆಂದು ಕರೆಯುತ್ತಾರೆ. ಮಾಸಗಳಲ್ಲಿಯೇ ಅತ್ಯಂತ ಶ್ರೇಷ್ಠ ಮಾಸ ಕಾರ್ತಿಕ ಮಾಸ ಎನ್ನುತ್ತಾರೆ. ಈ ಮಾಸದಲ್ಲಿ ಈ ಒಂದು ಕಾಯಿಯನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ.
ಕಾರ್ತಿಕ ಮಾಸದಲ್ಲಿ ಶಿವಕೇಶವರನ್ನು ಪೂಜಿಸಲಾಗುತ್ತದೆ. ಈ ಮಾಸದಲ್ಲಿ ದಾನಧರ್ಮಗಳನ್ನು ಮಾಡಿದರೆ ಶಿವ ಹಾಗೂ ವಿಷ್ಣು ಇಬ್ಬರ ಅನುಗ್ರಹವು ದೊರೆಯುತ್ತದೆ. ಹಾಗಾಗಿ ಕುಂಬಳಕಾಯಿಯನ್ನು ಕಾರ್ತಿಕ ಮಾಸದಲ್ಲಿ ದಾನ ಮಾಡಿದರೆ ಭೂಮಿ ದಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆಯಂತೆ.