ಬೆಂಗಳೂರು : ಸಾರಿಗೆ ನೌಕರರಿಗೆ ಸರ್ಕಾರದಿಂದ ಸಿಹಿ ಸುದ್ದಿ. ಸಾರಿಗೆ ನೌಕರರ 2 ತಿಂಗಳ ವೇತನ ನೀಡುವಂತೆ ಸಿಎಂ ಘೋಷಣೆ ಮಾಡಿದ್ದಾರೆ.
ಸಾರಿಗೆ ನೌಕರರಿಗೆ ಕೊರೊನಾ ಹಿನ್ನಲೆಯಲ್ಲಿ ಸರ್ಕಾರ ವೇತನ ನೀಡಿರಲಿಲ್ಲ. ಈ ಹಿನ್ನಲೆಯಲ್ಲಿ ಇದೀಗ ಸಾರಿಗೆ ನೌಕರರಿಗೆ 2 ತಿಂಗಳ ವೇತನ ನೀಡುವಂತೆ ಸಿಎಂ ಸೂಚಿಸಿದ್ದಾರೆ. ಅದಕ್ಕಾಗಿ ಸಾರಿಗೆ ಇಲಾಖೆ 634 ಕೋಟಿ ರೂ. ರಿಲೀಸ್ ಮಾಡಿದೆ. ಸಭೆ ಬಳಿಕ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.