ಬೆಂಗಳೂರು : ಮನೆಯ ಹೊಸ್ತಿಲು ಲಕ್ಷ್ಮೀ ದೇವಿಯ ವಾಸ ಸ್ಥಳ ಎಂದು ಹೇಳುತ್ತಾರೆ. ಆದ್ದರಿಂದ ವಾರಕ್ಕೊಮ್ಮೆ ಮುಖ್ಯದ್ವಾರದ ಹೊಸಿಲಿಗೆ ಅರಿಶಿಣ ಹಚ್ಚಿ ಕುಂಕುಮ ಬೊಟ್ಟು ಇಡುವುದು ತುಂಬಾ ಒಳ್ಳೆಯದು. ಇಲ್ಲದಿದ್ದರೆ ಕನಿಷ್ಠ ಪರ್ವದಿನಗಳಲಾದರೂ ಹೊಸಿಲಿಗೆ ಅರಿಶಿಣ ಹಚ್ಚಿ ಕುಂಕುಮ ಬೊಟ್ಟು ಇಡಬೇಕು.
ಏಕೆಂದರೆ ಆ ರೀತಿ ಮಾಡುವುದು ಲಕ್ಷ್ಮಿಪ್ರದ. ದುಷ್ಟಶಕ್ತಿಗಳು ಮನೆಯ ಒಳಗೆ ಬರಲ್ಲ. ಶುಕ್ರವಾರದ ದಿನ ಬೆಳಗ್ಗೆ ಸ್ನಾನ ಮಾಡಿ ಮನೆಯ ಹೊಸಿಲಿನ ಮೇಲೆ ಕಪ್ಪು ದಾರದಿಂದ ಕಟ್ಟಿದರೂ ದೋಷ ನಿವಾರಣೆಯಾಗುತ್ತದೆ. ಹಬ್ಬದ ದಿನಗಳಲ್ಲಿ ಮುಖ್ಯ ದ್ವಾರಕ್ಕೆ ಮಾವಿನ ತೋರಣ ಕಟ್ಟುವುದರಿಂದ ಮನೆಗೆ ಸೌಭಾಗ್ಯ ಸಿಗುತ್ತದೆ. ಅದೇ ರೀತಿ ಮನೆಯಲ್ಲಿ ವಾರಕ್ಕೊಮ್ಮೆ ಶುಕ್ರವಾರದ ಹೊತ್ತು ಇಲ್ಲದಿದ್ದರೆ, ಶನಿವಾರ, ಗುರುವಾರಗಳಲ್ಲಿ ಹೊಸ್ತಿಲಿಗೆ ತಪ್ಪದೆ ದೀಪಾರಾಧನೆ ಮಾಡಬೇಕು. ಪ್ರತಿದಿನ ಮಾಡಿದರೆ ಇನ್ನೂ ಉತ್ತಮ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ