ಬೆಂಗಳೂರು : ಹಿಂದೂ ಧರ್ಮದಲ್ಲಿ ಶಾಸ್ತ್ರ, ಸಂಪ್ರದಾಯಗಳಿಗೆ ಹೆಚ್ಚಿನ ಮಾನ್ಯತೆ ನೀಡಲಾಗುತ್ತದೆ. ಆದ್ದರಿಂದ ನಮ್ಮ ಹಿರಿಯರು ಕೆಲವೊಂದು ಸ್ಥಳಗಳನ್ನು ತುಂಬಾ ಪವಿತ್ರವೆಂದು ನಂಬಿರುತ್ತಾರೆ. ಇಂತಹ ಪವಿತ್ರವಾದ ಸ್ಥಳಗಳಿಗೆ ಚಪ್ಪಲಿ ಧರಿಸಿ ಹೋಗಬಾರದು, ಒಂದು ವೇಳೆ ಹೋದರೆ ದರಿದ್ರ ನಮ್ಮ ಬೆನ್ನುಹತ್ತುತ್ತದೆ ಎನ್ನುತ್ತಾರೆ. ಆ ಸ್ಥಳಗಳು ಯಾವುವು ಎಂಬುದನ್ನು ತಿಳಿಯೋಣ
ಹಿಂದೂ ಧರ್ಮದಲ್ಲಿ ಅಡುಗೆ ಮನೆಯಲ್ಲಿ ದೇವಿ ಅನ್ನಪೂರ್ಣೇಶ್ವರಿ ನೆಲೆಸಿರುತ್ತಾಳೆ ಎಂದು ಭಾವಿಸಲಾಗಿದೆ. ಆದ್ದರಿಂದ ಈ ಸ್ಥಳಕ್ಕೆ ಚಪ್ಪಲಿ ಧರಿಸಿ ಹೋಗಬಾರದು ಎಂದು ಹೇಳುತ್ತಾರೆ. ಹಾಗೇ ಸ್ಟೋರ್ ರೂಂ ಕೂಡ ಆಹಾರಕ್ಕೆ ಸೇರಿದ ಜಾಗವಾಗಿರುತ್ತದೆ. ಈ ಸ್ಥಳದಲ್ಲಿಯೂ ಚಪ್ಪಲಿ ಧರಿಸಿ ಹೋಗಬಾರದು ಎನ್ನುತ್ತಾರೆ ಹಿರಿಯರು.
ದೇವಸ್ಥಾನ, ಮನೆಯ ದೇವರ ಕೋಣೆಯಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆಂದು ನಂಬಲಾಗಿದೆ. ಆದ್ದರಿಂದ ದೇವರ ಕೋಣೆ ಹಾಗೂ ದೇವಸ್ಥಾನಗಳ ಒಳಗೆ ಎಂದೂ ಚಪ್ಪಲಿ ಧರಿಸಿ ಹೋಗಬಾರದು. ಅಲ್ಲದೇ ನದಿಗಳಲ್ಲಿ ದೇವಾನುದೇವತೆಗಳು ವಾಸವಾಗಿರುತ್ತಾರೆ. ಆದ್ದರಿಂದ ನದಿಗಳಿಗೆ ಇಳಿಯುವಾಗ ಚಪ್ಪಲಿ ಧರಿಸಬಾರದು ಎನ್ನುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.