ಬೆಂಗಳೂರು : ಹಿಂದೂ ಧರ್ಮದಲ್ಲಿ ಮರಗಿಡಗಳನ್ನು ಕೂಡ ದೇವರಂತೆ ಪೂಜಿಸಲಾಗುತ್ತದೆ. ಹಿಂದೂಗಳು ದೇವರಿಗೆ ನೀಡಿದಷ್ಟೇ ಮಹತ್ವವನ್ನು ಕೆಲವು ಗಿಡಮರಗಳಿಗೆ ಕೊಡುತ್ತಾರೆ. ಇಂತಹ ಮರಗಿಡಗಳನ್ನು ಮನೆಯ ಸುತ್ತಮುತ್ತ ನೆಡುವುದರಿಂದ ಯಾವ ಕಷ್ಟಗಳು ಬರುವುದಿಲ್ಲವಂತೆ.
ಬಾಳೆಗಿಡ : ಮನೆಯಲ್ಲಿ ಶುಭಕಾರ್ಯಗಳು ನಡೆಯದೆ ಇದ್ದಾಗ ಮನೆಯ ಹಿಂದೆ ಬಾಳೆಗಿಡವನ್ನು ನೆಡಬೇಕಂತೆ. ಇದರಿಂದ ಆ ಮನೆಯಲ್ಲಿ ಮದುವೆ ಕಾರ್ಯ ವಿಳಂಬವಾಗುತ್ತಿದ್ದರೆ ಅದು ಬೇಗ ನೆರವೇರುತ್ತದೆ.
ತುಳಸಿಗಿಡ : ಮನೆಯ ಮುಂದೆ ತುಳಸಿ ಗಿಡವನ್ನು ಬೆಳೆಸಿ ನಿತ್ಯ ಪೂಜೆ ಸಲ್ಲಿಸುವುದರಿಂದ ಮನೆಯೊಳಗೆ ನಕರಾತ್ಮಕ ಶಕ್ತಿಗಳು ಬರದಂತೆ ತಡೆಯುತ್ತದೆಯಂತೆ. ಹಾಗೇ ಆರೋಗ್ಯದ ದೃಷ್ಟಿಯಿಂದಲೂ ಇದು ಉತ್ತಮವಾಗಿದೆ.
ಶಮಿ ವೃಕ್ಷ: ಮನೆಯ ಮುಂದೆ ಶಮಿ ವೃಕ್ಷವನ್ನು ಬೆಳೆಸಿ ಆರಾಧಿಸುವುದರಿಂದ ಶನಿ ದೇವರ ಕೆಟ್ಟ ಪ್ರಭಾವದಿಂದ ಪಾರಾಗಬಹುದು.
ದಾಸವಾಳ : ದಾಸವಾಳ ಗಿಡವನ್ನು ಮನೆಯ ಮುಂದೆ ಬೆಳೆಸುವುದರಿಂದ ಮಂಗಳ ಗ್ರಹದ ಕೆಟ್ಟ ಪ್ರಭಾವವನ್ನು ತಡೆಯಬಹುದಂತೆ.
ದಾಳಿಂಬೆ ಗಿಡ : ಈ ಗಿಡವನ್ನು ಮನೆಯ ಮುಂದೆ ಬೆಳೆಸುವುದರಿಂದ ರಾಹುಕೇತುವಿನ ಪ್ರಭಾವ ನಮ್ಮ ಮೇಲೆ ಬೀಳುವುದಿಲ್ಲವಂತೆ.
ಎಕ್ಕದ ಗಿಡ: ಶಿವ ಪಾರ್ವತಿಯ ಸ್ವರೂಪವಾದ ಎಕ್ಕೆ ಗಿಡವನ್ನು ಮನೆಯಮುಂದೆ ಬೆಳೆಸಿ ಆರಾಧಿಸಿದರೆ ಶಿವನ ಕೃಪೆಗೆ ಪಾತ್ರರಾಗುತ್ತೀರಾ. ಕೆಟ್ಟ ಶಕ್ತಿಗಳ ಪ್ರಭಾವ ಮನೆಯ ಮೇಲೆ ಬೀಳುವುದಿಲ್ಲವಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.