ಬೆಂಗಳೂರು : ನಾವು ಪ್ರತಿದಿನ ಶಿವನನ್ನು ಪೂಜಿಸುತ್ತೇವೆ.ಆದರೆ ಈ ಒಂದು ದಿನ ಶಿವನನ್ನು ಪೂಜಿಸುವುದರಿಂದ ಮತ್ತು ಶಿವನಿಗೆ ಅಭಿಷೇಕಗಳು ಮಾಡುವುದರಿಂದ ತಿಳಿದೋ, ತಿಳಿಯದೆಯೋ ಮಾಡಿದ ಪಾಪಗಳು, ತಪ್ಪುಗಳು ಎಲ್ಲವೂ ತೊಲಗಿ ಹೋಗುತ್ತವೆ. ಆ ದಿನ ಯಾವುದು ಎಂಬುದನ್ನು ತಿಳಿಯೋಣ.
ಶ್ರಾವಣ ಮಾಸದ, ಅಮಾವಾಸ್ಯೆ ಸೋಮವಾರ, ಸೂರ್ಯ ಗ್ರಹಣ, ಈ ನಾಲ್ಕು ಒಂದೇ ದಿನ ಬರುವುದು ತುಂಬಾ ಅಪರೂಪಕ್ಕೆಂಬಂತೆ ನಡೆಯುತ್ತದೆ. ಈ ಅಮಾವಾಸ್ಯೆಯನ್ನು ‘ಸೋಮವತಿ ಅಮಾವಾಸ್ಯೆ’ ಎಂದು ಕರೆಯುತ್ತಾರೆ. ಈ ದಿನಕ್ಕಾಗಿ ಸಪ್ತ ಋಷಿಗಳು, ನವಗ್ರಹಗಳು, ಮುಕ್ಕೋಟಿ ದೇವತೆಗಳು ಕಾಯುತ್ತಿರುತ್ತಾರೆ. ಈ ದಿನ ಶಿವನಿಗೆ ಅಭಿಷೇಕ ಮಾಡಿ ಉಪವಾಸವಿದ್ದರೆ ಪುಣ್ಯ ಬರುತ್ತದೆಂದು ಪಂಡಿತರು ಹೇಳುತ್ತಿದ್ದಾರೆ. ಈ ದಿನ ಅಭಿಷೇಕ ಯಾಕೆ ಮಾಡುತ್ತಾರೆಂದರೆ ,ಈ ದಿನ ಸಕಲ ಶಕ್ತಿಗಳು ಲಿಂಗ ರೂಪವಾದ ಶಿವನಲ್ಲಿ ಮನೆ ಮಾಡಿಕೊಂಡಿರುತ್ತದೆ. ಆದ್ದರಿಂದ ಮಾಡಿದ ಪಾಪಗಳು ತೊಲಗಿ ಹೋಗುತ್ತದೆಂದು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ