Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾತ್ರಿ ವೇಳೆ ದುಷ್ಟ ಶಕ್ತಿ ಹಾವಳಿ ಹೆಚ್ಚಿರುತ್ತವೆ..!

ರಾತ್ರಿ ವೇಳೆ ದುಷ್ಟ ಶಕ್ತಿ ಹಾವಳಿ ಹೆಚ್ಚಿರುತ್ತವೆ..!
, ಗುರುವಾರ, 10 ನವೆಂಬರ್ 2016 (10:36 IST)
ವೇದ ಸುಳ್ಳಾದರೂ, ಶಾಸ್ತ್ರ ಸುಳ್ಳಾಗದು ಎನ್ನುವ ಮಾತಿದೆ. ಅದರಂತೆ ಶಾಸ್ತ್ರದಲ್ಲಿ ರಾತ್ರಿ ವೇಳೆ ಅನುಸರಿಸಬೇಕಾದ ಕೆಲವೊಂದಿಷ್ಟು ಮಾಹಿತಿಗಳಿವೆ. ಅವು ಮನುಷ್ಯನ ದೈನಂದಿನ ಬದುಕಿಗೆ ಹಾಗೂ ಉತ್ಸಾಹಕ್ಕೆ ಪೂರಕವಾಗಿ ಪರಿಣಮಿಸುತ್ತವೆ ಎಂದು ಸಾಧು, ಸಂತರು ಕಂಡುಕೊಂಡ ಸತ್ಯ. ಅದನ್ನು ಈಗಿನ ವೈಜ್ಞಾನಿಕ ದಿನಗಳಿಗೂ ಹೋಲಿಕೆ ಮಾಡಿಕೊಂಡಾಗ ಕೆಲವೊಂದಿಷ್ಟು ಹೌದು ಎಂದೆನಿಸುತ್ತದೆ.

 
ಸರಿ ಹಾಗಾದರೆ, ರಾತ್ರಿ ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹಾಗೆ ಮಾಡಿದಲ್ಲಿ ಜೀವನದಲ್ಲಿ ಬರುವ ಅನೇಕ ಕಷ್ಟಗಳು ದೂರವಾಗುತ್ತವೆ. ಅದ್ಯಾವುದು ಎಂದು ತಿಳಿದುಕೊಳ್ಳೋಣ.
 
-ರಾತ್ರಿ ಮಲಗುವಾಗ ಸೆಂಟ್, ಡಿಯೋ ಸೇರಿದಂತೆ ಸುಗಂಧ ದ್ರವ್ಯಗಳನ್ನು ಅನೇಕರು ಹಚ್ಚಿಕೊಳ್ತಾರೆ. ಆದ್ರೆ ಇದು ಒಳ್ಳೆಯ ಹವ್ಯಾಸವಲ್ಲ. ನಮ್ಮ ದೇಹದಿಂದ ಬರುವ ಸುವಾಸನೆ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
 
-ಸನಾತನ ಧರ್ಮದ ಪ್ರಕಾರ ರಾತ್ರಿ ಮಲಗುವ ಮುನ್ನ ಕೈ, ಕಾಲು ಹಾಗೂ ಮುಖವನ್ನು ತೊಳೆದು, ಬಟ್ಟೆಯಲ್ಲಿ ಒರೆಸಿಕೊಂಡು, ಭಗವಂತನ ಧ್ಯಾನ ಮಾಡ್ತಾ ಮಲಗಬೇಕು. ಹೀಗೆ ಮಾಡಿದ್ರೆ ರಾತ್ರಿ ಮಲಗಿದ ವೇಳೆ ನಾವೆಷ್ಟು ಬಾರಿ ಉಸಿರಾಡುತ್ತೇವೆಯೋ ಅಷ್ಟು ಬಾರಿ ದೇವರ ನಾಮ ಜಪಿಸಿದಂತಾಗುತ್ತದೆ.
 
-ರಾತ್ರಿ ಹಾಸಿಗೆಗೆ ಹೋದ ತಕ್ಷಣ ಕಟ್ಟಿದ್ದ ಕೂದಲುಗಳನ್ನು ಬಿಚ್ಚಿ ಮಲಗುವ ಹವ್ಯಾಸ ಅನೇಕ ಮಹಿಳೆಯರಿಗಿರುತ್ತದೆ. ಪುರಾಣದ ಪ್ರಕಾರ ಬಿಚ್ಚಿದ ಕೂದಲು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.  ಹಾಗಾಗಿ ರಾತ್ರಿ ಮಲಗುವಾಗ ಕೂದಲನ್ನು ಕಟ್ಟಿ ಮಲಗಬೇಕು.
 
-ರಾತ್ರಿ ವೇಳೆ ಸ್ಮಶಾನಕ್ಕೆ ಅಥವಾ ಸ್ಮಶಾನದ ಕಡೆ ಹೋಗಬಾರದು. ಯಾವಾಗಲೂ ಅಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ಮುಸ್ಸಂಜೆಯ ನಂತ್ರ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುತ್ತದೆ. ಅದು ನಮ್ಮ ಆತ್ಮಸಾಕ್ಷಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗೆ ಸೂರ್ಯಾಸ್ತದ ನಂತ್ರ ಸ್ನಾನ ಮಾಡಬಾರದೆಂದು ಗ್ರಂಥಗಳಲ್ಲಿ ಹೇಳಲಾಗಿದೆ.
 
-ರಾತ್ರಿ ಹೊತ್ತು ನಾಲ್ಕೈದು ರಸ್ತೆ ಕೂಡುವ ಜಾಗಕ್ಕೆ ಹೋಗಬಾರದು. ಪುರಾಣದ ಪ್ರಕಾರ ಅಲ್ಲಿ ರಾಹು ನೆಲೆಸಿರ್ತಾನೆ. ಅಪರಾಧ ಹಾಗೂ ತಪ್ಪುಗಳ ಮೂಲ ಕಾರಣ ರಾಹು. ಹಾಗೆ ಅಲ್ಲಿ ಭೂತ, ಪಿಶಾಚಿಗಳು ನೆಲೆಸಿರುತ್ತವೆ. ದುಷ್ಟಶಕ್ತಿಗಳ ವಾಸಸ್ಥಾನದಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುತ್ತದೆ. ರಾತ್ರಿ ಸಮಯ ಅನವಶ್ಯಕವಾಗಿ ಹೊರಗೆ ಹೋಗುವ ಬದಲು ಮನೆಯಲ್ಲಿರುವುದು ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ಮತ್ತು ಸಂಪತ್ತಿಗೆ ವಾಸ್ತು ಟಿಪ್ಸ್ ಪಾಲಿಸಿ ದುಷ್ಟಶಕ್ತಿಗಳನ್ನು ದೂರವಿಡಿ