ಬೆಂಗಳೂರು : ಮನೆಯಲ್ಲಿ ಕಸವಾದಾಗ ಪೊರಕೆಯಿಂದ ಗುಡಿಸುತ್ತೇವೆ. ಆದರೆ ಕಸವನ್ನು ಯಾವಾಗ ಬೇಕು ಆವಾಗ ಕಸ ಗುಡಿಸಬಾರದು, ಅದರಲ್ಲೂ ಈ ನಾಲ್ಕು ಸಮಯಗಳಲ್ಲಿ ಅಪ್ಪಿತಪ್ಪಿಯೂ ಕಸ ಗುಡಿಸಬಾರದು.
ಮನೆಯಲ್ಲಿ ಯಾರಾದರೂ ಊಟ ಮಾಡುವಾಗ ಕಸ ಗುಡಿಸಬಾರದು. ಇದರಿಂದ ದಾರಿದ್ರ್ಯ ದೋಷಗಳು ಬರುತ್ತದೆ. ಯಾರಾದರೂ ಮನೆಗೆ ಅತಿಥಿಗಳು ಬಂದು ಹೋಗುವ ವೇಳೆ ಅಥವಾ ಮನೆಯವರು ಹೊರಗಡೆ ಹೋದಾಗ ತಕ್ಷಣ ಕಸ ಗುಡಿಸಬಾರದು. ಸ್ವಲ್ಪ ಹೊತ್ತು ಬಿಟ್ಟು ಕಸ ಗುಡಿಸಬೇಕು. ದೇವರ ಪೂಜೆ ಮಾಡುವಾಗ ಕಸ ಗುಡಿಸಬಾರದು. ಕಸ ಗುಡಿಸಿದ ಬಳಿಕವೇ ದೇವರ ಪೂಜೆ ಮಾಡಬೇಕು. ಸಂಜೆ ದೀಪ ಹಚ್ಚಿದ ನಂತರ ಮುಸ್ಸಂಜೆ ವೇಳೆ ಕಸ ಗುಡಿಸಬಾರದು .