ಬೆಂಗಳೂರು: ಮಂಗಳವಾರ ವಿಶೇಷವಾಗಿ ದುರ್ಗಾದೇವಿಯ ವಾರವಾಗಿದೆ. ದುರ್ಗಾ ದೇವಿಯ ಈ ಎರಡು ಮಂತ್ರಗಳನ್ನು ಪಠಿಸುವುದರಿಂದ ಭಯ ನಾಶವಾಗುವುದು. ಅವು ಯಾವುವು ನೋಡೋಣ.
ದುರ್ಗಾ ದೇವಿ ಎಂದರೆ ಭಯ ನಾಶ ಮಾಡುವವಳು ಎಂದೇ ನಾವು ನಂಬುತ್ತೇವೆ. ಆಕೆಯ ರೂಪ ವ್ಯಗ್ರವಾದರೂ ಶರಣಾಗತಿಯಾಗಿ ಬರುವವಳಿಗೆ ತಾಯಿ ಯಾವತ್ತೂ ಒಳಿತನ್ನೇ ಮಾಡುತ್ತಾಳೆ. ಜೊತೆಗೆ ನಮಗೆ ಜೀವನದಲ್ಲಿ ಶತ್ರು ಭಯ, ಮಾಟಮಂತ್ರಾದಿಗಳ ಭಯವಿದ್ದರೆ ದುರ್ಗಾದೇವಿಯ ಪ್ರಾರ್ಥನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಧೈರ್ಯ ಮೂಡುವುದು.
ದುರ್ಗಾ ದೇವಿ ಶಕ್ತಿ ಸ್ವರೂಪಿಣಿ. ದೇವಿಯ ನವ ಶಕ್ತಿಗಳಲ್ಲಿ ದುರ್ಗೆಯೂ ಒಬ್ಬಳು. ಈಕೆ ಶತ್ರು ನಾಶ ಮಾಡುತ್ತಾಳೆ. ನಮ್ಮ ಸಂಕಷ್ಟಗಳನ್ನು ಪರಿಹರಿಸುವ ದುರ್ಗಾದೇವಿಗೆ ಎರಡು ವಿಶೇಷ ಮಂತ್ರಗಳ ಮೂಲಕ ಪೂಜೆ ಮಾಡಬಹುದು. ಅವುಗಳಲ್ಲಿ ಒಂದು ಹೀಗಿದೆ:
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣೀ ನಮೋಸ್ತುತೇ
ಇನ್ನೊಂದು ಮಂತ್ರ:
ಓಂ ಜಯಂತಿ ಮಂಗಳಾ ಕಾಳೀ ಭದ್ರಕಾಳಿ ಕಪಾಲಿನೀ
ದುರ್ಗಾ ಕ್ಷಮಾ ಶಿವಾ ಧಾತ್ರೀ ಸ್ವಾಹಾ ಸ್ವಧಾ ನಮೋಸ್ತುತೇ
ಈ ಎರಡು ಮಂತ್ರಗಳನ್ನು ನಿತ್ಯವೂ ಪಠಿಸುತ್ತಿದ್ದರೆ ನಿಮ್ಮ ಮನಸ್ಸಿನಲ್ಲಿರುವ ಭಯ ದೂರವಾಗಿ ದುರ್ಗಾದೇವಿಯ ಕೃಪೆಗೆ ಪಾತ್ರರಾಗುತ್ತೀರಿ.