ಬೆಂಗಳೂರು : ಲಕ್ಷ್ಮೀ ಪೂಜೆ ಮಾಡಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಲಕ್ಷ್ಮಿ ಪೂಜೆ ಮಾಡುವ ವೇಳೆ ಕೆಲವೊಂದು ವಸ್ತುಗಳನ್ನು ಬಳಸಿದ್ರೆ ದೇವಿ ಮುನಿಸಿಕೊಳ್ತಾಳೆ. ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಹಾಗಾದ್ರೆ ಅವು ಯಾವುದೆಂದು ತಿಳಿಯೋಣ.
ಭಗವಂತ ವಿಷ್ಣು ತುಳಸಿ ಪ್ರಿಯ. ಆದ್ರೆ ಲಕ್ಷ್ಮಿಗೆ ತುಳಸಿ ಮೇಲೆ ದ್ವೇಷವಿದೆ. ಹಾಗಾಗಿ ಲಕ್ಷ್ಮಿ ಪೂಜೆ ಮಾಡುವ ವೇಳೆ ತುಳಸಿಯನ್ನು ಬಳಸಬೇಡಿ.
ಲಕ್ಷ್ಮಿಗೆ ದೀಪ ಬೆಳಗುವಾಗ ವರ್ತಿಯ ಬಣ್ಣ ಕೆಂಪಗಿರಲಿ. ಹಾಗೆ ದೀಪವನ್ನು ಬಲ ಭಾಗಕ್ಕಿಡಿ. ಎಡಭಾಗಕ್ಕೆ ದೀಪವನ್ನು ಇಡಬೇಡಿ.
ಧನಲಕ್ಷ್ಮಿ ಪೂಜೆ ಮಾಡುವ ವೇಳೆ ಅಗರಬತ್ತಿಯನ್ನು ಬಲಭಾಗಕ್ಕೆ ಹಚ್ಚಬೇಡಿ. ಅಗರಬತ್ತಿ, ಧೂಪ, ದ್ರವ್ಯಗಳನ್ನು ಎಡಭಾಗಕ್ಕೆ ಇಡಿ.
ಬಿಳಿಯ ಹೂವನ್ನು ಲಕ್ಷ್ಮಿಗೆ ಅರ್ಪಿಸಬೇಡಿ. ಕೆಂಪು ಗುಲಾಬಿ ಅಥವಾ ಕೆಂಪು ಕಮಲದ ಹೂವನ್ನು ದೇವಿಗೆ ನೈವೇದ್ಯ ಮಾಡಿ.
ಭಗವಂತ ವಿಷ್ಣುವಿನ ಪೂಜೆ ಮಾಡದೆ ನೀವು ದೇವಿ ಲಕ್ಷ್ಮಿಯ ಪೂಜೆ ಮಾಡಿದ್ರೆ ಫಲ ಸಿಗುವುದಿಲ್ಲ. ಹಾಗಾಗಿ ಸಂಜೆ ಮೊದಲು ಗಣೇಶನ ಪೂಜೆ ಮಾಡಿ ನಂತ್ರ ವಿಷ್ಣು ಹಾಗೂ ಲಕ್ಷ್ಮಿಯ ಪೂಜೆ ಮಾಡಿ.
ಲಕ್ಷ್ಮಿ ಪೂಜೆ ಮಾಡುವ ವೇಳೆ ಪ್ರಸಾದವನ್ನು ದಕ್ಷಿಣ ದಿಕ್ಕಿಗಿಡಿ. ಹಾಗೆ ಹೂ, ಪತ್ರೆಯನ್ನು ದೇವಿಯ ಮುಂದಿಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.