Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಲ್ಟಿಪ್ಲೆಕ್ಸ್ ಗಳ ಮೇಲೆ ಕಿಡಿಕಾರಿದ ನಿರ್ದೇಶಕ ಪ್ರೇಮ್

ಮಲ್ಟಿಪ್ಲೆಕ್ಸ್ ಗಳ ಮೇಲೆ ಕಿಡಿಕಾರಿದ ನಿರ್ದೇಶಕ ಪ್ರೇಮ್
ಬೆಂಗಳೂರು , ಗುರುವಾರ, 11 ಅಕ್ಟೋಬರ್ 2018 (07:16 IST)
ಬೆಂಗಳೂರು : ಬಿಗ್ ಬಜೆಟ್ ನಲ್ಲಿ ಮೂಡಿಬಂದ ‘ದಿ ವಿಲನ್’ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿರಬೇಕಾದ ನಿರ್ದೇಶಕ ಪ್ರೇಮ್ ಇದೀಗ ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಸಿನಿಮಾಗಳ ಹಾಗೂ ಪರಭಾಷೆಯ ಸಿನಿಮಾಗಳ ನಡುವೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಮಲ್ಟಿಪ್ಲೆಕ್ಸ್​ಗಳಲ್ಲಿ ಕನ್ನಡ ಚಿತ್ರಗಳಿಗೆ ಶೇ. 50ರಷ್ಟು ಪರ್ಸೆಂಟೇಜ್‌ ಹಣ ಕೊಟ್ಟರೆ, ಪರ ಭಾಷಾ ಸಿನಿಮಾಗಳಿಗೆ ಮಾತ್ರ ಶೇ. 55ರಷ್ಟು ಪರ್ಸೆಂಟೇಜ್‌ ಕೊಡ್ತಾರೆ. ಈಗ ದಿ ವಿಲನ್ ಚಿತ್ರಕ್ಕೂ  ಶೇ. 50 ರಷ್ಟು ಮಾತ್ರ ಶೇರ್ ಕೊಡಲು ಮುಂದಾಗಿರುವ ಮಲ್ಟಿಪ್ಲೆಕ್ಸ್​ಗಳ ಮಹಾಮೋಸಕ್ಕೆ ನನ್ನ ಧಿಕ್ಕಾರ ಎಂದು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.


ಅಲ್ಲದೇ ಈ ವಿಚಾರವಾಗಿ ಕಳೆದ ವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು ಏನು ಪ್ರಯೋಜನವಾಗಿಲ್ಲ. ದಯವಿಟ್ಟು ವಾಣಿಜ್ಯ ಮಂಡಳಿ ಈ ಸಮಸ್ಯೆಯನ್ನು ಬಗೆಹರಿಸಿ ಎಂದು ಆಗ್ರಹಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕನ ಮೇಲೆ ಲೈಂಗಿಕ ಕಿರುಕುಳದ ಆರೋಪ