ಬೆಂಗಳೂರು: ಹಿಂದೂ ಧರ್ಮದಲ್ಲಿ ಪ್ರತಿಯೊಂದು ವಾರಕ್ಕೂ ಅದರದ್ದೇ ಆದ ವಿಶೇಷತೆಗಳಿರುತ್ತವೆ. ಅದೇ ರೀತಿ ಬುಧವಾರದಂದು ಆದಿ ಪೂಜಿತ ಗಣಪತಿಯ ದಿನವಾಗಿದೆ. ಈ ದಿನ ಈ ಒಂದು ಕೆಲಸ ಮಾಡುವುದರಿಂದ ನಿಮಗೆ ಅರೋಗ್ಯ ಸಮಸ್ಯೆಗಳು ದೂರವಾಗುತ್ತದೆ.
ಗಣಪತಿಯನ್ನು ವಿದ್ಯಾಧಿಪತಿ ಎಂದು ಕರೆಯಲಾಗುತ್ತದೆ. ವಿದ್ಯಾಭ್ಯಾಸದಲ್ಲಿ ತೊಡಕುಗಳಾಗುತ್ತಿದ್ದರೆ ಗಣೇಶನನ್ನು ಪೂಜೆ ಮಾಡುವುದರಿಂದ ವಿಘ್ನಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಗಣಪತಿ ಕೇವಲ ವಿದ್ಯೆಗೆ ಮಾತ್ರ ದೇವರಲ್ಲ. ಆತನನ್ನು ಪೂಜಿಸುವುದರಿಂದ ಆರೋಗ್ಯ ಸಮಸ್ಯೆಗಳೂ ದೂರವಾಗುತ್ತದೆ.
ಕೇವಲ ಮಂತ್ರ ಮಾತ್ರವಲ್ಲ, ನಾವು ಮಾಡುವ ದಾನ ಧರ್ಮಗಳೂ ನಮ್ಮನ್ನು ಕಾಪಾಡುತ್ತದೆ. ಅದೇ ರೀತಿ ಬುಧವಾರದಂದು ತೃತೀಯ ಲಿಂಗಿಗಳಿಗೆ ಹಸಿರು ಬಣ್ಣದ ಬಟ್ಟೆ ದಾನ ಮಾಡುವುದರಿಂದ ಆರೋಗ್ಯ ಸಮಸ್ಯೆ ದೂರವಾಗುತ್ತದೆ. ಇದರಿಂದ ಭಗವಂತನೂ ಸಂತುಷ್ಟನಾಗುತ್ತಾನೆ ಎಂಬ ನಂಬಿಕೆಯಿದೆ.
ಅದೇ ರೀತಿ ಬುಧವಾರದಂದು ಬಡವರಿಗೆ ಪಚ್ಚೆ ಹೆಸರು ಅಥವಾ ಯಾವುದೇ ಹಸಿರು ಬಣ್ಣದ ವಸ್ತುಗಳನ್ನು ದಾನ ಮಾಡುವುದು ಶ್ರೇಯಸ್ಕರವಾಗಿದೆ. ಇದರಿಂದ ಬುಧಗ್ರಹಕ್ಕೆ ಸಂಬಂಧಿಸಿದ ಸಮಸ್ಯೆಗಳೂ ನಿವಾರಣೆಯಾಗುತ್ತದೆ. ಇದರಿಂದ ಮನೋವ್ಯಾಧಿಗಳೂ ನಿವಾರಣೆಯಾಗುತ್ತದೆ.