Publish Date: Mon, 14 Oct 2019 (08:14 IST)
Updated Date: Mon, 14 Oct 2019 (08:15 IST)
ಬೆಂಗಳೂರು : ಎಲ್ಲರ ಮನೆಯಲ್ಲಿ ತುಳಸಿ ಗಿಡ ಬೆಳೆಸುತ್ತಾರೆ. ಇದು ನಕರಾತ್ಮಕ ಶಕ್ತಿಯಿಂದ ಮನೆ, ಮನೆಯವರನ್ನು ರಕ್ಷಿಸುತ್ತದೆ ಎಂದು. ಆದಕಾರಣ ಮನೆಯಲ್ಲಿ ಪದೇ ಪದೇ ಸಮಸ್ಯೆಗಳು ಕಾಡುತ್ತಿದ್ದರೆ ತುಳಸಿ ಗಿಡದ ಕೆಳಗಿರುವ ಮಣ್ಣಿನಿಂದ ಹೀಗೆ ಮಾಡಿ, ಸಮಸ್ಯೆಗಳು ಪರಿಹಾರವಾಗುತ್ತದೆ.
ಬೆಳಿಗ್ಗೆ ತುಳಸಿ ಗಿಡಕ್ಕೆ ಪೂಜೆ ಮಾಡಿದ ಪ್ರಾರ್ಥಿಸಿದ ನಂತರ ಅದರ ಕೆಳಗಿರುವ ಒಂದು ಹಿಡಿ ಮಣ್ಣನ್ನು ತೆಗೆದುಕೊಂಡು ಒಂದು ಬಾಳೆಎಲೆಗೆ ಹಾಕಿ ಅದಕ್ಕೆ ಅರಶಿನ, ಕುಂಕುಮ, ಎರಡು ಹನಿ ಸಾಸಿವೆ ಎಣ್ಣೆ ಹಾಕಿ ಬಲಗೈಯಿಂದ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಉಂಡೆ ತಯಾರಿಸಿ ಬಾಳೆಎಲೆಯ ಮೇಲಿಟ್ಟು ಎಲೆಯಿಂದ ಸುತ್ತಿ ಇಡಿ. ನಂತರ ಸಂಜೆಯ ವೇಳೆ ಒಂದು ಆಲದ ಮರದ ಬಳಿ ಹೋಗಿ ಆ ಮಣ್ಣಿನ ಉಂಡೆಯನ್ನು ಇಟ್ಟು ಪ್ರಾರ್ಥಿಸಬೇಕು.
ಹೀಗೆ ಮಾಡಿದ ವಾರದಲ್ಲಿಯೇ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ. ಯಾವುದೇ ಸಮಸ್ಯೆಗಳಿದ್ದರೂ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ಪಂಡಿತರು.