Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಕಾಲ ಎಷ್ಟೇ ಬದಲಾದರೂ ನಮ್ಮ ಪ್ರಾಚೀನ ಕಾಲದಿಂದ ಆಚರಿಸಿಕೊಂಡು ಬರುತ್ತಿರುವ ಆಚಾರಗಳನ್ನು ಪಾಲಿಸುವುದು ಮಾತ್ರ ಬಿಟ್ಟಿಲ್ಲ. ಬಹಳಷ್ಟು ಜನ ಏನಾದರೂ ಕೆಲಸದ ನಿಮಿತ್ತ ಹೊರಹೋಗುವಾಗ ಶಕುನಗಳನ್ನು ನೋಡುವ ಅಭ್ಯಾಸವಿರುತ್ತದೆ.
ಎದುರಾದ ವ್ಯಕ್ತಿ ಅಥವಾ ಪ್ರಾಣಿಯ ಆಧಾರದಲ್ಲಿ ಒಳ್ಳೆಯ, ಕೆಟ್ಟ ಶಕುನಗಳ ಹೇಳುವುದು ನಮ್ಮ ಹಿರಿಯರಿಂದ ಕೇಳುತ್ತಿದ್ದೇವೆ. ಆದರೆ ಮನೆಯಿಂದ ಹೊರಹೋಗುವ ಮುನ್ನ ಈ ಒಂದು ಕೆಲಸವನ್ನು ಮಾಡಿದರೆ ಹೋಗುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.
ಮನೆಯಿಂದ ಹೊರಗೆ ಹೋಗುವಾಗ ನಮ್ಮ ಉಸಿರು ಯಾವ ಮೂಗಿನಿಂದ ಬರುತ್ತದೆ ಎಂಬುದನ್ನು ನೋಡಿಕೊಂಡು ಆ ಪಾದವನ್ನು ಮೊದಲು ಹೊರಗಿಟ್ಟು ಹೋದರೆ ಕಾರ್ಯದಲ್ಲಿ ಜಯ ಸಿಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ