ಬೆಂಗಳೂರು : ವಾಸ್ತು ಪ್ರಕಾರ ಒಂದೂಂದು ದಿಕ್ಕು ಒಂದೊಂದು ಬಣ್ನವನ್ನು ಸೂಚಿಸುತ್ತದೆ. ಹಾಗಾಗಿ ಮನೆಯನ್ನು ನಿರ್ಮಿಸುವಾಗ ವಾಸ್ತು ಎಷ್ಟು ಮುಖ್ಯನೋ ಹಾಗೇ ಆಯಾ ದಿಕ್ಕಿನಲ್ಲಿ ಆಯಾ ಬಣ್ಣವನ್ನು ಅಳವಡಿಸುವುದು ಅಷ್ಟೇ ಮುಖ್ಯ. ಇದರಿಂದ ಆ ಮನೆಯಲ್ಲಿ ಸುಖ, ಸಮೃದ್ಧಿ ಮನೆಮಾಡಿರುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ದಿಕ್ಕಿನಲ್ಲಿ ಹಸಿರು ಬಣ್ಣದ ವಸ್ತುಗಳನ್ನು ಜೋಡಿಸಿದರೆ ತುಂಬಾ ಒಳ್ಳೆಯದು. ಅಲ್ಲದೇ ಪೂರ್ವ ದಿಕ್ಕು ಮರಕ್ಕೆ ಸಂಬಂಧಿಸಿದ ದಿಕ್ಕಾಗಿರುವುದರಿಂದ ಮರದ ವಸ್ತುಗಳನ್ನು ಕೂಡ ಈ ದಿಕ್ಕಿನಲ್ಲಿ ಜೋಡಿಸಿದರೆ ಒಳ್ಳೆಯದು. ಹಾಗಾಗಿ ವಾಸ್ತು ಶಾಸ್ತ್ರಜ್ಞರು ಮನೆಯ ಬಾಗಿಲು ಕಿಟಕಗಳನ್ನು ಪೂರ್ವ ದಿಕ್ಕಿಗೆ ಇಡುವಂತೆ ಸೂಚಿಸುತ್ತಾರೆ.
ಅಲ್ಲದೇ ಪೂರ್ವದಿಕ್ಕಿನಲ್ಲಿ ವಾಸ್ತು ಸರಿಯಾಗಿದ್ದರೆ ಮನೆಯ ಹಿರಿಯ ಮಗ ಜೀವನ ಉತ್ತಮವಾಗಿರುತ್ತದೆ. ಆತ ಪ್ರಗತಿಯ ಹಾದಿಯತ್ತ ಸಾಗುತ್ತಾನೆ. ಮತ್ತು ಮರಕ್ಕೆ ಸಂಬಂಧಿಸಿದ ಕೆಲಸಕ್ಕೆ ಮಾಡಿದರೆ ಯಶಸ್ಸು ಗಳಿಸುತ್ತಾನೆ ಎನ್ನಲಾಗಿದೆ.