ಬೆಂಗಳೂರು : ಮನೆಯನ್ನು ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಿಸುವುದು ಮಾತ್ರವಲ್ಲ ಮನೆಯಲ್ಲಿ ಬಳಸುವ ನೀರಿನ ಟ್ಯಾಪ್ ಗಳು, ಸ್ನಾನಗ್ರಹಗಳು , ವಾಶ್ ಬೆಸೀನ್ ಮತ್ತು ಗೀಸರ್ ಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಉತ್ತಮ.
ನೀರು ಹಾಗೂ ನೀರಿಗೆ ಸಂಬಂಧಿಸಿದ ಕೆಲವು ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ತೊಡಗಿಸದಿದ್ದರೆ ಅದು ನಕರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ವಾಟರ್ ಟ್ಯಾಪ್ , ಶವರ್ ಅಳವಡಿಸಬೇಕು.
ವಾಶ್ ಬೇಸಿನ್ , ಗೀಸರ್ ಮತ್ತು ಸ್ನಾನ ಮಾಡುವ ಬಾತ್ ಟಬ್ ನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸಬೇಕು. ಮನೆಯ ನೀರಿನ ಒಳಚರಂಡಿಯನ್ನು ಉತ್ತರ ದಿಕ್ಕಿನಲ್ಲಿ ಜೋಡಿಸಬೇಕು.