Publish Date: Mon, 20 Jan 2020 (05:52 IST)
Updated Date: Mon, 20 Jan 2020 (05:54 IST)
ಬೆಂಗಳೂರು : ಗಂಡ ತನ್ನ ಮಾತು ಕೇಳಬೇಕು ಎಂಬ ಹಂಬಲ ಎಲ್ಲಾ ಹೆಂಡತಿಗಿರುತ್ತದೆ. ಆದರೆ ಕೆಲವು ಪುರುಷರು ಹೆಂಡತಿಯ ಮಾತು ಕೇಳುವುದಿಲ್ಲ. ಅಂತವರು ಮಾತು ಕೇಳಬೇಕೆಂದರೆ ಈ ಬೇರಿನಿಂದ ಹೀಗೆ ಮಾಡಿ.
ಮಂಗಳವಾರದಂದು ಬಿಳಿ ಎಕ್ಕದ ಗಿಡದ ಬೇರನ್ನು ತೆಗೆದುಕೊಂಡು ಬಂದು ಅದನ್ನು ಗಂಡನ ಸೊಂಟಕ್ಕೆ ಕಟ್ಟಬೇಕು. ಹಾಗೇ ಹೆಂಡತಿ ಅದನ್ನು ಮಂಗಳಸೂತ್ರಕ್ಕೆ ಕಟ್ಟಿಕೊಳ್ಳಬೇಕು. ಇದರಿಂದ ಅವರ ಸಂಸಾರ ಸುಖಕರವಾಗಿರುತ್ತದೆ. ಅಲ್ಲದೇ ಗಂಡ ಹೆಂಡತಿಯ ಮಾತನ್ನು ಕೇಳುತ್ತಾನೆ.
ಹಾಗೇ ಗಂಡ ಹೆಂಡತಿಯ ನಡುವೆ ಜಗಳ ನಡೆಯುತ್ತಿದ್ದರೆ ನೀವು ರಾತ್ರಿ ಮಲಗುವ ಮಂಚದ ಕೆಳಗೆ ಕರ್ಪೂರ ಹಾಗೂ ಸಿಂಧೂರವನ್ನು ಇಡಬೇಕು. ಬೆಳಿಗ್ಗೆ ಎದ್ದ ತಕ್ಷಣ ಗಂಡ ಕರ್ಪೂರವನ್ನು ಹಚ್ಚಿದರೆ ಹೆಂಡತಿ ಮಂಚದ ಸುತ್ತಲೂ ಸಿಂಧೂರವನ್ನು ಹಾಕಬೇಕು. ಹೀಗೆ ಮಾಡುತ್ತಾ ಬಂದರೆ ಅವರ ನಡುವೆ ಅನ್ಯೋನ್ಯತೆ ಬೆಳೆಯುತ್ತದೆ.