Publish Date: Wed, 03 Jun 2020 (08:37 IST)
Updated Date: Wed, 03 Jun 2020 (08:39 IST)
ಬೆಂಗಳೂರು : ಕಂಕಣ ಭಾಗ್ಯ ಕೂಡಿ ಬಂದಾಗ ಮದುವೆಯಾಗುತ್ತದೆ ಎದು ಹೇಳುತ್ತಾರೆ. ಆದರೆ ಕೆಲವರಿಗೆ ದೋಷಗಳಿಂದ ಮದುವೆಯಾಗುವುದಿಲ್ಲ. ಅಂತವರು ಈ ಸಣ್ಣ ತಂತ್ರವನ್ನು ಮಾಡಿ.
ಸೋಮವಾರದಂದು ಬೆಳಿಗ್ಗೆ 1 ವೀಳ್ಯದೆಲೆಯನ್ನು ತೆಗೆದುಕೊಂಡು ಅದಕ್ಕೆ ಜೇನುತುಪ್ಪ ಹಚ್ಚಿ ಕಪ್ಪು ಇರುವೆಗಳಿಗೆ ಆಹಾರವಾಗಿ ಇಡಬೇಕು. ಆಗ ಕಪ್ಪು ಇರುವೆಗಳು ಅದನ್ನು ತಿಂದರೆ ನಿಮಗೆ ಯಾವುದೇ ದೋಷವಿದ್ದರೂ ಪರಿಹಾರವಾಗುತ್ತದೆ.
ಹಾಗೇ ವೀಳ್ಯದೆಲೆಗೆ ಜೇನುತುಪ್ಪ ಹಚ್ಚುವಾಗ “ದೇವಿಂದ್ರಾಣಿ ನಮಸ್ತುಭ್ಯಂ ದೇವೇಂದ್ರ ಪ್ರಿಯಭಾಷಿಣಿ ಸರ್ವ ಸೌಭಾಗ್ಯ ಕಾರ್ಯೇಶು ಸರ್ವ ಸೌಭಾಗ್ಯದಾಯಿನಿ” ಈ ಮಂತ್ರವನ್ನು 21 ಬಾರಿ ಜಪಿಸಬೇಕು. ಇರುವೆಗಳು ಜೇನುತುಪ್ಪವನ್ನು ತಿನ್ನುವಾಗ ನಿಮ್ಮ ಮನೆ ದೇವರಿಗೆ ಸಂಕಲ್ಪ ಮಾಡಿಕೊಳ್ಳಿ.