Publish Date: Sat, 02 Feb 2019 (09:53 IST)
Updated Date: Sat, 02 Feb 2019 (09:55 IST)
ಬೆಂಗಳೂರು : ಅಮವಾಸ್ಯೆ ದುಷ್ಟ ಶಕ್ತಿಗಳಿಗೆ ಪ್ರಶಸ್ತವಾದ ದಿನ. ಮಂತ್ರ-ತಂತ್ರ ಮಾಡುವವರು ಈ ದಿನ ಪೂಜೆ ಮಾಡಿ ವಿಶೇಷ ಸಿದ್ಧಿಗಳನ್ನು ಪಡೆಯಲು ಪ್ರಯತ್ನಿಸ್ತಾರೆ. ಆದರೆ ಅಮವಾಸ್ಯೆ ದುಷ್ಟ ಶಕ್ತಿಗಳಿಗೆ ಮಾತ್ರವಲ್ಲ ಒಳ್ಳೆಯ ಕೆಲಸಕ್ಕೂ ಇದು ಉತ್ತಮವಾದ ದಿನವೇ.
ಹೌದು. ಅಮವಾಸ್ಯೆಯಂದು ರಾತ್ರಿ ಯಾರ ಮನೆಯಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆಯೋ ಆ ಮನೆಯಲ್ಲಿ ತಾಯಿ ಲಕ್ಷ್ಮಿ, ಚಿನ್ನ ಹಾಗೂ ಆಭರಣ ರೂಪದಲ್ಲಿ ನೆಲೆಸುತ್ತಾಳೆ. ಈ ದಿನ ರಕ್ತದಾನ ಮಾಡುವುದರಿಂದ ಮಾನಸಿಕ ಅಸ್ವಸ್ಥತೆಯಿಂದ ಮುಕ್ತಿ ಸಿಗಲಿದೆ.
ಈ ದಿನ ಪೂರ್ವಜರನ್ನು ನೆನೆದು ದಾನ, ತರ್ಪಣ ಬಿಟ್ಟರೆ ಪೂರ್ವಜರಿಂದ ಆಶೀರ್ವಾದ ಸಿಗುತ್ತದೆ.
ಸದಾ ಸುಮಂಗಲಿಯಾಗಬೇಕೆಂದು ಬಯಸುವ ಮಹಿಳೆಯರು ಅಶ್ವಥ ಪೂಜೆಯನ್ನು ಮಾಡಬೇಕು. ಅಶ್ವಥ ಮರವನ್ನು ಮುಟ್ಟಿ ಪೂಜೆ ಮಾಡುವುದರಿಂದ ಪಾಪ ನಾಶವಾಗಿ, ಆಯಸ್ಸು ಹೆಚ್ಚಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.