ಶುಕ್ಲಪಕ್ಷದ ಮಂಗಳವಾರದಂದು ಪ್ರಾರಂಭಿಸಬೇಕು. ದೇವರ ಮನೆಯಲ್ಲಿರುವ ಲಕ್ಷ್ಮೀನರಸಿಂಹಸ್ವಾಮಿ ಫೋಟೊ ಮುಂದೆ 2 ವೀಳ್ಯದೆಲೆಯನ್ನು ತೆಗೆದುಕೊಂಡು ಅದರ ಮೇಲೆ ಸ್ವಲ್ಪ ಬೆಣ್ಣೆಯನ್ನು ಇಟ್ಟು ಅದರ ಮೇಲೆ ಒಂದು ಮಣ್ಣಿನ ದೀಪವನ್ನು ಇಟ್ಟು ದೀಪ ಹಚ್ಚಿ. ಈ ದೀಪ ಉತ್ತರ ದಿಕ್ಕನ್ನು ನೋಡುವ ಹಾಗೆ ಇಡಿ. ಬಳಿಕ ದೇವರ ಬಳಿ ಪ್ರಾರ್ಥಿಸುತ್ತಾ ಬೆಣ್ಣೆ ಕರಗಿದಂತೆ ನನ್ನ ಕಷ್ಟಗಳು ಕರಗಿ ಹೋಗಿ ಸ್ವಂತ ಮನೆಯನ್ನು ದಯಪಾಲಿಸು ದೇವರೇ ಎಂದು ಸಂಕಲ್ಪ ಮಾಡಿಕೊಳ್ಳಿ. ಬಳಿಕ ಲಕ್ಷ್ಮೀನರಸಿಂಹಸ್ವಾಮಿಗೆ ಸಂಬಂಧಪಟ್ಟ ಯಾವುದಾರೊಂದು ಮಂತ್ರ ಜಪಿಸಿ. ಹೀಗೆ 16 ವಾರಗಳ ಕಾಲ ಮಾಡಿದರೆ ನಿಮ್ಮ ಸ್ವಂತ ಮನೆಯ ಕನಸು ನನಸಾಗುತ್ತದೆ.